ಭಾರತೀಯರ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ : ಯಾಕೆ ಗೊತ್ತಾ..! ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ..!
ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ವಿದೇಶಗಳಿಗೆ ವಲಸೆ ಹೋಗಿರುವವರ ಪೈಕಿ ಭಾರತೀಯರ ಸಂಖ್ಯೆ 18 ಮಿಲಿಯನ್.. ಅಂದ್ರೆ ಬರೋಬ್ಬರಿ 1.8 ಕೋಟಿ. ಹೀಗಾಗಿ ವಿಶ್ವಸಂಸ್ಥೆ ಅನಿವಾಸಿ ಭಾರತೀಯರು, ಭಾರತೀಯ ಮೂಲದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ಅನಿವಾಸಿ ಭಾರತೀಯರ ಸಮುದಾಯವನ್ನು ಬೆರಗುಗೊಳಿಸುವ, ಕ್ರಿಯಾತ್ಮಕ ಸಮುದಾಯವೆಂದು ವಿಶ್ವಸಂಸ್ಥೆ ಬಣ್ಣಿಸಿದೆ.
ನಿಮಗೆ ಗೊತ್ತಾ…? 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಯಾವುದು..!
ಹೆಚ್ಚಾಗಿ ಭಾರತೀಯ ಮೂಲದವರು ಅಮೆರಿಕ, ಸೌದಿ ಅರೇಬಿಯಾ, ಯುಎಇಗಳಲ್ಲಿ ನೆಲೆಸಿದ್ದಾರೆ. ಭಾರತೀಯ ಮೂಲದವರು ಜಗತ್ತಿನಾದ್ಯಂತ ಹರಡಿದ್ದಾರೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಇಲಾಖೆಯ ಜನಸಂಖ್ಯೆಗೆ ಸಂಬಂಧಿಸಿದ ವಿಭಾಗದ ಅಧಿಕಾರಿ ಕ್ಲೇರ್ ಮೆನೊಜ್ಜಿ ಹೇಳಿದ್ದಾರೆ. ಆದರೆ ಭಾರತೀಯ ಮೂಲದ ವಲಸಿಗ ಸಮುದಾಯ ಗಲ್ಫ್ ನಿಂದ ಉತ್ತರ ಅಮೇರಿಕ, ಆಸ್ಟ್ರೇಲಿಯಾ, ಆಸ್ಟ್ರೇಲಿಯಾ, ಬ್ರಿಟನ್ ವರೆಗೂ ವ್ಯಾಪಿಸಿದೆ ಎಂದು ವಿಶ್ವಸಂಸ್ಥೆ ಅಧಿಕಾರಿ ತಿಳಿಸಿದ್ದಾರೆ.
18 ಮಿಲಿಯನ್ ಅನಿವಾಸಿ ಭಾರತೀಯರ ಪೈಕಿ ಅಮೆರಿಕದಲ್ಲಿ 2.7 ಮಿಲಿಯನ್ , ಯುಎಇಯಲ್ಲಿ 3.5 ಮಿಲಿಯನ್, ಸೌದಿ ಅರೇಬಿಯಾದಲ್ಲಿ 2.5 ಮಿಲಿಯನ್ ಭಾರತೀಯರು ಇದ್ದಾರೆ ಎಂಬುದು ವಿಶ್ವಸಂಸ್ಥೆ ವರದಿಯಿಂದ ತಿಳಿದುಬಂದಿದೆ. ಇನ್ನೂ ವಿಶ್ವಸಂಸ್ಥೆಯ ವರದಿ ಅನ್ವಯ ಭಾರತ ಬಿಟ್ರೆ ಚೀನಾದ 10 ಮಿಲಿಯನ್, ಮೆಕ್ಸಿಕೋದ 11 ಮಿಲಿಯನ್, ರಷ್ಯಾದ 11 ಮಿಲಿಯನ್, ಸಿರಿಯಾದ 8 ಮಿಲಿಯನ್, ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ. ಅಂದ್ರೆ ಭಾರತೀಯರೇ ಅಗ್ರಸ್ಥಾನದಲ್ಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








