ಬೆಂಗಳೂರು: ವಾಷಿಂಗ್ಟನ್ (Washington DC) ಡಿಸಿಯ ನ್ಯಾಷನಲ್ ಮಾಲ್ನಲ್ಲಿ ನಡೆಯುತ್ತಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ (World Culture Festival)ದಲ್ಲಿ 180 ದೇಶಗಳಿಂದ ಆಗಮಿಸಿದ್ದ ಜನರು, ಉಕ್ರೇನ್ನಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
180 ದೇಶಗಳಿಂದ ಬಂದಿದ್ದ ಜನರು ನೃತ್ಯ, ಸಂಗೀತ ಮತ್ತು ಆಹಾರದೊಡನೆ ವಿವಿಧ ರಾಷ್ಟ್ರಗಳ ಸಂಸ್ಕೃತಿಗಳನ್ನು ಕಂಡು ಸಂಭ್ರಮಿಸಿದರು. ಇಲ್ಲಿ ಭಾರತದ ಸಂಕಲ್ಪ ಶಕ್ತಿ ಪ್ರತಿಬಿಂಬಿಸಿತು. ರವಿಶಂಕರ್ ಗುರೂಜಿ (Ravishankar Guruji) ಯೋಗ ಮತ್ತು ಧ್ಯಾನದ ಪ್ರಕ್ರಿಯೆ ಹೇಳಿಕೊಟ್ಟರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಾಜಿ ರಾಷ್ಟ್ರಪತಿಗಳಾದ ರಾಮ್ನಾಥ್ ಕೋವಿಂದ್ ಮಾತನಾಡಿ, ಕರಾವಳಿ ಬಯಲು, ನದಿಯ ತೀರ, ಮರುಭೂಮಿ, ಪರ್ವತ ಶ್ರೇಮಿ ಸೇರಿದಂತೆ ವಿವಿಧ ಮೂಲೆ ಮೂಲೆಗಳಿಂದ ಬಂದು ಜನರು ಇಲ್ಲಿ ಸೇರಿದ್ದಾರೆ. ಗುರುದೇವರು ಇಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.