ಕೋಲಾರದಲ್ಲಿ 187 ಶಾಲಾ ಮಕ್ಕಳಿಗೆ ಸೋಂಕು Saaksha Tv
ಕೋಲಾರ: ಜಿಲ್ಲೆಯಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಮಕ್ಕಳಲ್ಲಿ ಹರಡುತ್ತಿದೆ. ಎಂದು ಶಿಕ್ಷಣ ಇಲಾಖೆ ಕಚೇರಿಯ ಅಧಿಕಾರಿ ಸಿ.ಅರ್ ಆಶೋಕ ಮಾಹಿತಿ ನೀಡಿದ್ದಾರೆ.
ಕೋಲಾರದಲ್ಲಿ 187 ಶಾಲಾ ಮಕ್ಕಳಲ್ಲಿ ಸೊಂಕು ಪತ್ತೆಯಾಗಿದ್ದು, ಇದರಲ್ಲಿ 100 ಜನ ಗಂಡು ಮಕ್ಕಳು ಮತ್ತು 87 ಹೆಣ್ಣುಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಂಗಾರಪೇಟೆಯಲ್ಲಿ 6, ಕೆಜಿಎಫ್ ನಲ್ಲಿ 21, ಕೋಲಾರನಲ್ಲಿ 22, ಮಾಲೂರುನಲ್ಲಿ 8, ಮುಳಬಾಗಿಲುನಲ್ಲಿ 22, ಶ್ರೀನಿವಾಸಪುರನಲ್ಲಿ 5 ಶಾಲಾ ಮಕ್ಕಳಲ್ಲಿ ಸೊಂಕಿತ ಪ್ರಕರಣ ಪತ್ತೆಯಾಗಿವೆ. ಹಾಗಾಗಿ ಅತ್ಯಧಿಕವಾಗಿ ಸೊಂಕು ಪತ್ತೆಯಾದ ಶಾಲೆಗಳಿಗೆ 5 ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಅಲ್ಲದೇ ಕರೋನ ಪೀಡಿತ ಶಾಲೆಗಳಲ್ಲಿ ಸ್ಯಾನಿಟ್ರೈಜರ್ ಸಿಂಪಡಣೆ, ಕರೋನ ಕುರಿತು ಮಕ್ಕಳಲ್ಲಿ ಕೊರೊನಾ ಕುರಿತು ಜಾಗೃತಿ, ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.








