LPG ಸಿಲಿಂಡರ್ ಬೆಲೆ ಏರಿಕೆ, ಗ್ರಾಹರಿಗೆ ಹೆಚ್ಚಿದ ಹೊರೆ
ದೆಹಲಿ: ಆರ್ಥಿಕ ಹೊಸ ವರ್ಷದ ಮೊದಲದಿನವಾದ ಇಂದಿನಿಂದ ಎಲ್ .ಪಿ. ಜೆ ಸಿಲಿಂಡರ್ ದರ ಏರಿಕೆಯಾಗಿದ್ದು, 19ಕೇಜಿ LPG ಸಿಲಿಂಡರ್ ಬೆಲೆ 250 ರೂ ಏರಿಕೆ ಮಾಡಲಾಗಿದೆ.
ಗೃಹ ಬಳಕೆಯ ಸಿಲಿಂಡರ್ ಏರಿಕೆಯಾಗಿಲ್ಲವಾದರು, ವಾಣಿಜ್ಯ ಬಳೆಕೆಯ 19 ಕೆಜಿಯ ಸಿಲಿಂಡರ್ ಬೆಲೆ ಸದ್ಯ 2,253 ರೂ ಗೆ ಹಚ್ಚಳವಾಗಿದೆ. ಅಷ್ಟೇ ಅಲ್ಲದೆ, ಜೆಟ್ ಇಂಧನ ದರ ಕೂಡ ಶೇಕಡಾ 2 ರಷ್ಟು ಹೆಚ್ಚಳವಾಗಿದೆ. ಜೆಟ್ ಇಂಧನ ದರ ಏರಿಕೆಯಿಂದ ವಿಮಾನ ಪ್ರಯಾಣ ದರ ದುಬಾರಿ ಸಾಧ್ಯತೆ ಇದೆ. ಇನ್ನು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ವಾಣಿಜ್ಯ ಚಟುವಟಿಕೆಗಳು ಸಹಿತ ಹೊಟೇಲ್ ಉಪಹಾರ ಬೆಲೆಯಲ್ಲಿ ಏರಿಕೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗುತ್ತಿದ್ದು, ಸತತ ಬೆಲೆ ಏರಿಕೆಯ ಬಳಿಕ ಇಂದು (ಏಪ್ರಿಲ್ 1, 2022) ಇಂಧನ ದರದಲ್ಲಿ ಯಾವುದೇ ಏರಿಕೆ, ಇಳಿಕೆ ಆಗಿಲ್ಲ. ಅದರಂತೆ ಶುಕ್ರವಾರ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ.
ಕಳೆದ 11 ದಿನಗಳಲ್ಲಿ ಇಂಧನ ಬೆಲೆ ಪ್ರತಿ ಲೀಟರ್ಗೆ ಸರಾಸರಿ 6.40 ರೂ ಹೆಚ್ಚಾಗಿದೆ. ಈ 11 ದಿನಗಳಲ್ಲಿ ಇದು ಎರಡನೇ ಬಾರಿಗೆ ಇಂಧನ ದರ ಏರಿಕೆಯಾಗದೇ ಉಳಿದುಕೊಂಡಿದೆ. ಏಪ್ರಿಲ್ ತಿಂಗಳ ಮೊದಲ ದಿನ ಜನರಿಗೆ ಮತ್ತೆ ಇಂಧನ ದರ ಏರಿಕೆಯ ಬಿಸಿ ಮುಟ್ಟುವುದು ತಪ್ಪಿದೆ.
ಇನ್ನೂ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107.30 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.27 ರೂಪಾಯಿ ದಾಖಲಾಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 115.42 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.58 ರೂಪಾಯಿ ನಿಗದಿಯಾಗಿದೆ. ಗುಜರಾತ್ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 101.71 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.94 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 113.27 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 100.16 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 101.66 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 93.22 ರೂಪಾಯಿ ನಿಗದಿಯಾಗಿದೆ.