ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 2.46 ಲಕ್ಷ ಕಾರ್ಮಿಕರ ಕಾರ್ಡ್ ಗಳು ರದ್ದಾಗಿವೆ.
ಬಿಪಿಎಲ್, ಎಪಿಎಲ್ ಕಾರ್ಡ್ (APL Card) ಬೆನ್ನಲ್ಲೇ ಸರ್ಕಾರ ಈಗ ಕಾರ್ಮಿಕರ ಕಾರ್ಡ್ಗಳನ್ನು (Labour Card) ಅಮಾನತು ಮಾಡಲು ಮುಂದಾಗಿದೆ. ಸರ್ಕಾರ ಸದ್ಯ 2.46 ಲಕ್ಷ ಕಾರ್ಮಿಕರ ಕಾರ್ಡ್ಗಳನ್ನು ಅಮಾನತು ಮಾಡಿದೆ.
ಕಟ್ಟಡ ಮತ್ತು ಇನ್ನಿತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿದ್ದಾರೆ. ಈ ಪೈಕಿ 2,46,951 ಕಾರ್ಡ್ ಗಳು ನಕಲಿ ಎಂದು ಕಾರ್ಮಿಕ ಇಲಾಖೆ ಅಮಾನತು ಮಾಡಲು ಆದೇಶಿಸಿದೆ.
ನಕಲಿ ಕಾರ್ಡ್ ಗಳನ್ನು ಮಾಡಿಸಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ನಕಲಿ ಕಾರ್ಡ್ಗಳ (Fake Card) ಪತ್ತೆಗೆ ಮುಂದಾಗಿತ್ತು. ಹಾವೇರಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು 1,69,180 ಕಾರ್ಡ್ಗಳನ್ನು ಅಮಾನತು ಮಾಡಲಾಗಿದೆ.
ಕಾರ್ಮಿಕರ ಕಾರ್ಡ್ನಿಂದ ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ ಸೇರದಂತೆ ಹಲವು ಸೌಲಭ್ಯಗಳು ಸಿಗುತ್ತಿದ್ದವು. ಇದರಿಂದಾಗಿ ಕೋಟ್ಯಾಂತರ ರೂ. ಸರ್ಕಾರಕ್ಕೆ ಲಾಭವಾಗಲಿದೆ.