ಅಬುದಾಬಿಯಲ್ಲಿ ಡ್ರೋನ್ ದಾಳಿ, ಇಬ್ಬರು ಭಾರತೀಯರ ಸಾವು..
ಅಬುಧಾಬಿಯಲ್ಲಿ ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎಂದು ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.
ಸೋಮವಾರದ ದಾಳಿಯಲ್ಲಿ ಆರು ಜನರು ಗಾಯಗೊಮಡಿದ್ದು ಅದರಲ್ಲಿ ಇಬ್ಬರು ಭಾರತಿಯರು ಸೇರಿದ್ದಾರೆ. ವೈದ್ಯಕೀಯ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಅಬುಧಾಬಿಯ ರಾಯಭಾರ ಕಚೇರಿ ತಿಳಿಸಿದೆ.
ಅಬುಧಾಬಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಸೌದಿ ಅರೇಬಿಯಾ ನೇತೃತ್ವದ ಸಮ್ಮಿಶ್ರ ಪಡೆಗಳು ಹೌತಿ ಹಿಡಿತದಲ್ಲಿರುವ ಯೆಮೆನ್ ರಾಜಧಾನಿ ಸನಾ ಮೇಲೆ ವೈಮಾನಿಕ ದಾಳಿ ನಡೆಸಿವೆ. ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾದ ಆರಂಭಿಕ ಅಂದಾಜಿನ ಪ್ರಕಾರ, ವೈಮಾನಿಕ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಸೋಮವಾರ ಸೌದಿ ಅರೇಬಿಯಾ ಕಡೆಗೆ ಉಡಾವಣೆಯಾದ ಎಂಟು ಡ್ರೋನ್‌ಗಳನ್ನು ತಡೆದಿರುವುದಾಗಿ ಒಕ್ಕೂಟವು ಹೇಳಿದೆ.
ಘಟನೆಯ ನಂತರ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿರುವ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ, “ಇಬ್ಬರು ಮೃತ ಭಾರತೀಯ ಪ್ರಜೆಗಳ ಗುರುತುಗಳನ್ನು ಕಂಡುಹಿಡಿಯಲಾಗಿದೆ. ದುಬೈ ಅಧಿಕಾರಿಗಳು ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಎಂದು ತಿಳಿಸಿದೆ.








