ಇಡೀ ವಿಶ್ವವೇ ಕೊರೊನಾ ಹಾವಳಿಗೆ ಬೆಚ್ಚಿಬಿದ್ದಿದೆ. ಎಷ್ಟರ ಮಟ್ಟಿಗೆ ಅಂದರೆ ಜನರು ಮನೆಯಿಂದ ಹೊರ ಬರುವುದಕ್ಕೂ ನೂರು ಬಾರಿ ಅಲ್ಲ ಸಾವಿರ ಸಲ ಯೋಚಿಸುವಂತಹ ಪರಿಸ್ಥಿತಿಯಿದೆ. ಇದು ಒಂದೆಡೆಯಾದ್ರೆ ಇಡೀ ವಿಶ್ವದ ಹಲವೆಡೆ ಕೊರೊನಾ ಜೊತೆಗೆ ಪ್ರವಾಹದ ಆತಂಕವಿರುವುದು ಯಾರಿಗೂ ಗೊತ್ತಿಲ್ಲದ ವಿಚಾರವೇನಲ್ಲಾ. ಹೀಗಿರುವಾಗ ಮಹಿಳೆಯರು ಪುರುಷರಗಿಂತ ಏನೂ ಕಮ್ಮಿ ಇಲ್ಲ ಎಂಬುವಂತೆ ಮಹಿಳೆಯರಿಬ್ಬರು ಕೊರೊನಾಗೂ ಜಗ್ಗದೇ, ನೆರೆಗೂ ಬಗ್ಗದೇ ಧೈರ್ಯ ಪ್ರದರ್ಶಿಸಿ ಸಾಧನೆ ಮಾಡಿ ಜಗತ್ತೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ.
ಹೌದು ಬ್ರಿಟನ್‌ನ ಇಬ್ಬರು ಮಹಿಳೆಯರು ಕರೊಆ ವೈರಸ್ ಹಾವಳಿ ಮತ್ತು ಪ್ರಕೃತಿ ವಿಕೋಪಗಳನ್ನು ನಿಭಾಯಿಸಿ ಒಂದೇ ಸೈಕಲ್‍ನಲ್ಲಿ ಪ್ರಪಂಚ ಪರ್ಯಟನೆ ಮಾಡಿ ಗಿನ್ನಿಸ್ ದಾಕಲೆ ಮಾಡಿದ್ದಾರೆ. ಪ್ರಕೃತಿ ವಿಕೋಪಕ್ಕೂ ಜಗ್ಗದೇ ಕೊರೊನಾ ವೈರಸ್ ಗೂ ಹೆದರದೆ ತಮ್ಮ ಗುರಿ ಮುಟ್ಟಿದ್ದಾರೆ. ಇನ್ನೂ ವಿಶೇಷ ಎಂದರೆ ಈ ಮಹಿಳೆಯರಿಬ್ಬರೂ ಸಹ 50 ವರ್ಷ ಮೇಲ್ಪಟ್ಟವರೇ. ಈಗಿನ ಕಾಲದಲ್ಲಿ ಯುವಕ ಯುವತಿಯರು ಮನೆಯಲ್ಲೇ ಫೋನ್, ವಾಟ್ಸಾಪ್ , ಫೇಸ್ ಬುಕ್ ನಲ್ಲಿ ಕಾಲ ಕಳೆಯೋದೇ ಹೆಚ್ಚು. ಅಂತದರಲ್ಲಿ 54 ವರ್ಷದ ರಾಝ್ ಮಾರ್ಸ್ ಎನ್ ಹಾಗೂ 55 ವರ್ಷದ ಕ್ಯಾಟ್ ಡಿಕ್ಸೆ ನ್ ಎಂಬುವವರ ಸಾಧನೆ ನಿಜಕ್ಕೂ ಎಂತವರನ್ನೂ ನಿಬ್ಬೆರಗಾಗಿಸದೇ ಇರುವುದಿಲ್ಲ. ಅಷ್ಟೇ ಅಲ್ಲ ಈ ಮಹಿಳೆಯರ ಸಾಧನೆ ನಿಜಕ್ಕೂ ಯುವ ಪೀಳಿಗೆಗೆ ಮಾದರಿ. 
ಈ ಮಹಿಳೆಯರು ಅತಿ ವೇಗವಾಗಿ ವಿಶ್ವ ಪ್ರದಕ್ಷಿಣೆ ಹಾಕಿದ ವನಿತೆಯರೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಈ ವೀರ ವನಿತೆಯರು 2019ರ ಜೂನ್ ನಲ್ಲಿ ವಿಶ್ವ ಪರ್ಯಟನೆ ಆರಂಭಿಸಿದ್ದರು. ಇವರು ಪ್ರಯಾಣ ಮಾಡಿದ್ದು 263 ದಿನಗಳು, 8 ಗಂಟೆಗಳು ಮತ್ತು ಏಳು ನಿಮಿಷ. ಈ ನಡುವೆಯೇ ಕರೊನಾ ವೈರಸ್‌ಇಡೀ ವಿಶ್ವವನ್ನು ನಡುಗಿಸಿತ್ತು. ಆದರೆ ಅದಕ್ಕೆ ಹೆದರದೇ ಈ ಮಹಿಳೆಯರು ಸೈಕಲ್ ಮೇಲೆ ಜಗತ್ತನ್ನು ಸುತ್ತಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರ ಈ ಸಾಧನೆಯು 2021ರ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲ ಈ ಮಹಿಳೆಯರು ಕೇವಲ ಮಹಿಳಾ ವಿಭಾಗದಲ್ಲಿ ಮಾತ್ರವಲ್ಲ ಪುರುಷರ ದಾಖಲೆಯನ್ನು ಮೀರಿಸಿದ್ದಾರೆನ್ನಲಾಗಿದೆ.









