ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೋನಾ ವಿರುದ್ಧ ಹೋರಾಟಕ್ಕೆ 20 ಲಕ್ಷ ಕೋಟಿ ರೂ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಿದರು.
ಕೊರೋನಾ ಎಂಬ ವೈರಸ್‍ನಿಂದ ವಿಶ್ವದ ಎಲ್ಲಾ ರಾಷ್ಟ್ರಗಳು ಕಂಗಾಲಾಗಿದ್ದು, ಜನರ ಜೀವ ಉಳಿಸುವುದಕ್ಕಾಗಿ ಹೋರಾಡುತ್ತಿವೆ. ಜಗತ್ತೇ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇದರಿಂದ ಹೊರಬರಲು ನಮ್ಮೆಲ್ಲರ ಸಂಕಲ್ಪ ಮತ್ತಷ್ಟು ಕಠಿಣ ಮತ್ತು ದೃಢವಾಗಬೇಕಿದೆ, ಎಲ್ಲರೂ ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟರು.
ಕಳೆದ ನಾಲ್ಕು ತಿಂಗಳಿನಿಂದ ಕೊರೋನಾ ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿದ್ದು, ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಕಠಿಣ ಕ್ರಮಗಳನ್ನು ಕೈಗೊಂಡು ಜೀವ ಉಳಿಸಲು ಪ್ರಯತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುತ್ತಾ ನಾವು ಮುಂದೆ ಸಾಗಬೇಕಿದೆ.
ಮೊದಲು ಭಾರತದಲ್ಲಿ ಎನ್-95 ಮಾಸ್ಕ್ ಗಳ ಉತ್ಪಾದನೆ ಬೆರಳಿಣಿಕೆಯಲ್ಲಿ ಆಗುತ್ತಿತ್ತು. ಇಂದು ಪ್ರತಿದಿನ 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್, ಮಾಸ್ಕ್ ಗಳ ಉತ್ಪಾದನೆ ಆಗುತ್ತಿದೆ. ಕೊರೋನಾದಿಂದ ನಾವು ಬದಲಾಗಿರುವುದಕ್ಕೆ ಈ ಉತ್ಪಾದನೆ ಒಂದು ಸ್ಪಷ್ಟ ಉದಾಹರಣೆ.
ವಿಶ್ವವೇ ಒಂದು ಎಂಬ ಸಂದೇಶ ಸಾರಿದ ಸಂಸ್ಕೃತಿ ಮತ್ತು ಸಂಸ್ಕಾರ ನಮ್ಮದು. ಇಡೀ ವಿಶ್ವವೇ ನಮ್ಮ ಆತ್ಮ. ಹಾಗಾಗಿ ವಿಶ್ವದ ಕಲ್ಯಾಣವೇ ಭಾರತವಾಗಿದೆ.ಇದರಿಂದಾಗಿ ಇಡೀ ವಿಶ್ವ ಭಾರತದೆಡೆ ನಮ್ಮ ದೃಷ್ಟಿ ನೆಟ್ಟಿದೆ. ಭಾರತ ಬಯಲು ಮುಕ್ತ ಶೌಚವಾದಾಗ, ಮಾನವ ಸಂಕುಲದ ಅಭಿವೃದ್ಧಿಗೆ ಭಾರತ ಉತ್ತಮ ಕೆಲಸ ಮಾಡುತ್ತಿದೆ ಎಂದು ವಿಶ್ವವೇ ನಂಬಿಕೆ ಇಟ್ಟಿತ್ತು. ವಿಶ್ವದ ಬೆಳವಣಿಗೆಗೆ ಭಾರತದ ಪ್ರಗತಿ ಪೂರಕವಾಗಿದೆ. ಭಾರತ ಸಮೃದ್ಧ, ಚಿನ್ನದ ನಾಡಾಗಿದ್ದ ಸಮಯದಿಂದಲೂ ವಿಶ್ವದ ಕಲ್ಯಾಣಕ್ಕಾಗಿ ಶ್ರಮಿಸಿದೆ. ಆದರೆ ಗುಲಾಮಗಿರಿಯಿಂದಾಗಿ ಭಾರತ ನಲುಗಿತು.
ಇಂದು ನಮ್ಮ ಬಳಿ ತಂತ್ರಜ್ಞಾನ, ಜ್ಞಾನ, ಪ್ರತಿಭಾನ್ವಿತರು ಎಲ್ಲವೂ ಇದೆ. ನಾವೆಲ್ಲರೂ ಜೊತೆಯಾಗಿ ಉತ್ತಮ ಉತ್ಪನ್ನಗಳನ್ನು ತಯಾರಿಸೋಣ. ಸ್ವಾವಲಂಬಿ ಭಾರತ ಆರ್ಥಿಕತೆ, ಮೂಲಭೂತ ಸೌಕರ್ಯ, ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆ-ಪೂರೈಕೆ ಎಂಬ ಐದು ಆಧಾರ ಸ್ತಂಭಗಳ ಮೇಲೆ ನಿಂತಿದೆ ಎಂದು ಪ್ರಧಾನಿ ಹೇಳಿದರು.
ಭಾರತದ ಆರ್ಥ ವ್ಯವಸ್ಥೆಯ ಚೇತರಿಕೆಗಾಗಿ 20 ಲಕ್ಷ ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ ಇದರಿಂದ ಸಣ್ಣ ಉದ್ಯಮ, ಗೃಹ ಉದ್ಯಮ, ಲಘು ಉದ್ಯಮ, ಮಧ್ಯಮ ಉದ್ಯಮ, ಕಾರ್ಮಿಕರು, ರೈತರು, ಮಧ್ಯಮ ವರ್ಗದ ಜನರಿಗೆ ಈ ಪ್ಯಾಕೇಜ್ ಲಾಭ ಸಿಗಲಿದೆ. ದೇಶಕ್ಕಾಗಿ ತೆರಿಗೆ ಪಾವತಿಸುವವರಿಗಾಗಿ ಕೂಡ ಈ ಪ್ಯಾಕೇಜ್ ನಲ್ಲಿ ಲಾಭ ಸಿಗಲಿದ್ದು, ನಾಳೆ ಹಣಕಾಸು ಸಚಿವರು ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.
ಲಾಕ್‍ಡೌನ್ ನಿಂದಾಗಿ ರಸ್ತೆ ಬದಿ ವ್ಯಾಪಾರಿಗಳು, ಪುಟ್ಟ ಅಂಗಡಿ ನಡೆಸುವವರು, ಮೀನುಗಾರರು, ಸಣ್ಣ ವ್ಯಾಪಾರಿಗಳು ತುಂಬ ಕಷ್ಟ ಅನುಭವಿಸಬೇಕಾಯಿತು ಎಂದ ಪ್ರಧಾನಿ ಇದೀಗ ನಾವೆಲ್ಲರೂ ಒಟ್ಟಾಗಿ ಇವರನ್ನು ಮೇಲೆತ್ತಬೇಕಾಗಿದೆ. ಈ ಅರ್ಥಿಕ ಪ್ಯಾಕೇಜ್ ಇವರೆಲ್ಲರ ಬದುಕಿಗೆ ಬೆಳಕಾಗಲಿ. ಪ್ರತಿ ಭಾರತೀಯರೂ ಸ್ವದೇಶೀ ವಸ್ತುಗಳನ್ನು ಖರೀದಿಸುವ ಮತ್ತು ಇತರರನ್ನು ಖರೀದಿಸುವಂತೆ ಪ್ರೇರೇಪಿಸುವ ಶಪಥ ಮಾಡೋಣ.
ಕೊರೋನಾ ಸೋಂಕು ಬಹಳ ದೀರ್ಘ ಕಾಲದವರೆಗೆ ಇರಲಿದ್ದು, ಲಾಕ್‍ಡೌನ್ ನಾಲ್ಕನೇ ಹಂತ ಮೇ 18ರ ಬಳಿಕ ಹೊಸ ರೀತಿಯಲ್ಲಿ ಜಾರಿಯಾಗಲಿದೆ. ಮಾಸ್ಕ್ ಧರಿಸುವ ಮೂಲಕ ನಾವೆಲ್ಲರೂ ಕೊರೋನಾ ವಿರುದ್ಧ ಹೋರಾಡೋಣ ಎಂದರು.
ವರದಕ್ಷಿಣೆ ಕಿರುಕುಳ: ನೇಣಿಗೆ ಶರಣಾದ ರೂಪಾ
ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ಅಮೂಲ್ಯ ಜೀವವನ್ನು ಕಸಿದುಕೊಂಡಿದೆ. ಈ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಮ್ಮನಹಳ್ಳಿಯಲ್ಲಿ ನಡೆದಿದೆ, ಅಲ್ಲಿ ರೂಪಾ ಎಂಬ 29 ವರ್ಷದ...