ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 20 ಲಕ್ಷ ದಂಡ
ರನ್‌ವೇ ನಿರ್ವಹಣೆಯನ್ನು ನಿರ್ಲಕ್ಷಿಸುವ ಮೂಲಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (NSCBIA) ಭಾರತದ ವಾಯುಯಾನ ನಿಯಂತ್ರಣ ಸಂಸ್ಥೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 20 ಲಕ್ಷ ರೂ ಗಳ ದಂಡ ವಿಧಿಸಿದೆ.
“ಕೆಲವು ತಿಂಗಳ ಹಿಂದೆ ವಿಮಾನ ನಿಲ್ದಾಣದ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಿದ ನಂತರ, ಆಡಿಟ್ ವರದಿಯು ಎನ್ಎಸ್ಸಿಬಿಐಎ ಗಂಭೀರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಕಂಡುಹಿಡಿದಿದೆ, ವಿಶೇಷವಾಗಿ ರನ್ವೇ ನಿರ್ವಹಣಾ ಕಾರ್ಯದಲ್ಲಿ 20 ಲಕ್ಷ ರೂ ದಂಡ ವಿಧಿಸಲು ನಿರ್ಧರಿಸಲಾಗಿದೆ,”. DGCA ಯ ಅಧಿಕಾರಿ ANI ಗೆ ದೃಢಪಡಿಸಿದ್ದಾರೆ.
ಡಿಜಿಸಿಎಯ ಆಡಿಟ್ ವರದಿಯು ಕೋಲ್ಕತ್ತಾ ವಿಮಾನ ನಿಲ್ದಾಣವು ಕಡ್ಡಾಯ ಸುರಕ್ಷತೆಯ ಅಗತ್ಯತೆಗಳ ಪ್ರಕಾರ ರನ್‌ವೇ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ಸೂಚಿಸಿದೆ.
ವಿಮಾನ ನಿಲ್ದಾಣದಲ್ಲಿ ಭದ್ರತಾ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದ್ದಕ್ಕಾಗಿ ವಿಮಾನ ನಿಲ್ದಾಣಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಆಡಿಟ್ ವರದಿಯ ಪ್ರಕಾರ, ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ವಹಣೆಯನ್ನು ಮಾರ್ಗಸೂಚಿಗಳ ಪ್ರಕಾರ ಮಾಡಲಾಗಿಲ್ಲ, ರನ್‌ವೇಯಲ್ಲಿನ ದೀಪಗಳನ್ನು ಸರಿಯಾಗಿ ಸರಿಪಡಿಸಲಾಗಿಲ್ಲ ಮತ್ತು ರನ್‌ವೇಯಲ್ಲಿ ಫಾರಿನ್ ಆಬ್ಜೆಕ್ಟ್ ಡೆಬ್ರಿಸ್ (ಎಫ್‌ಒಬಿ) ವರದಿಯಾಗಿದೆ, ಅದು ಲ್ಯಾಂಡಿಂಗ್ ಮತ್ತು ಟೇಕ್‌ಆಫ್ ಸಮಯದಲ್ಲಿ ವಿಮಾನದ ಸುರಕ್ಷತೆಯ ವಿಷಯಕ್ಕೆ ಕಳವಳಕಾರಿಯಾಗಿದೆ” ಎಂದು ಡಿಜಿಸಿಎ ಅಧಿಕಾರಿ ತಿಳಿಸಿದರು.