ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ 4 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಇದರಲ್ಲಿ 2 ಸಾವಿರಕ್ಕೂ ಹೆಚ್ಚು ಅವ್ಯವಹಾರ ಆಗಿದೆ. ಈ 2 ಸಾವಿರ ಕೋಟಿ ರೂ.. ಹಣ ಕೆಲ ಮಂತ್ರಿಗಳು ಹಾಗೂ ಅಧಿಕಾರಿಗಳ ಜೇಬು ಸೇರಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೊರೊನಾ ವೈದ್ಯಕೀಯ ಸಾಮಗ್ರಿ ಖರೀದಿಗೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ಈ ಹಗರಣದ ಬಗ್ಗೆ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಈ ಮೂಲಕ ಸತ್ಯ ಸಂಗತಿ ಹೊರಗೆ ಬರಬೇಕು ಎಂದು ಆಗ್ರಹಿಸಿದರು.
ವೆಂಟಿಲೇಟರ್. ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನರ್, ಮಾಸ್ಕ್ ಸ್ಯಾನಿಟೈಸ್ ಖರೀಯಲ್ಲೂ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಮಾರುಕಟ್ಟೆ ಬೆಲೆಗಿಂತ ಎರಡು, ಮೂರುಪಟ್ಟು ಹಣ ಕೊಟ್ಟು ಖರೀದಿ ಮಾಡಲಾಗಿದೆ.
ಕೊರೊನಾ ನಿಯಂತ್ರಣದ ಹೋರಾಟಕ್ಕೆ ಹಿಂದೆಯೂ ಸಹಕಾರ ಕೊಟ್ಟಿದ್ದೇವೆ, ಮುಂದೆಯೂ ಸಹಕಾರ ಕೊಡುತ್ತೇವೆ. ಆದರೆ, ಭ್ರಷ್ಟಾಚಾರಕ್ಕೆ ನಮ್ಮ ಸಹಕಾರ ಕೊಡಬೇಕೇ. ಜನದ್ರೋಹವನ್ನು ನಾವು ಬಯಲು ಮಾಡದೇ ಇದ್ದರೆ ನಾವು ಜನದ್ರೋಹ ಮಾಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೊನಾ ಸಾಮಗ್ರಿ ಖರೀದಿಗೆ 4167 ಕೋಟಿ ಖರ್ಚಾಗಿದೆ. ಆದರೆ ಅದೆಲ್ಲಾ ಎಲ್ಲಿ ಹೋಯಿತು. ಮಾರುಕಟ್ಟೆ ದರಕ್ಕಿಂತ 2 ಪಟ್ಟು, ಮೂರು ಪಟ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ. ರಾಜ್ಯದ ಜನ ಬೀದಿ ಬೀದಿಯಲ್ಲಿ ಹೆಣ ಹೊತ್ತುಕೊಂಡು ತಿರುಗುತ್ತಿದ್ದಾರೆ, ಇದರಿಂದ ನಾವು ರಾಜ್ಯದ ಜನತೆ ತಲೆತಗ್ಗಿಸುವಂತೆ ಮಾಡಿದೆ. ರಾಜ್ಯದ ಜನರು ಕೊರೊನಾ ಸಂಕಷ್ಟದಲ್ಲಿದ್ದರೆ ಬಿಜೆಪಿಯರು ಲೂಟಿ ಹೊಡೆಯಲು ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದ ಸುವಾನಸೆ ಎನ್ನಲೇ..!
ಬಿಜೆಪಿಯವರು ಸಂಸ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಬಳ್ಳಾರಿ, ರಾಯಚೂರು, ಯಾದಗಿರಿಯಲ್ಲಿ ಕೊರೊನಾದಿಂದ ಮೃತಪಟ್ಟವರನ್ನು ಅಮಾನವೀಯಾವಗಿ ಸಂಸ್ಕಾರ ಮಾಡಿದ್ದಾರೆ. ಹಾಗಾದರೆ ಈ ಸರ್ಕಾರಕ್ಕೆ ಎಂತಹ ಮಾನವೀಯತೆ ಇದೆ, ಇದೇನಾ ನಿಮ್ಮ ಸಂಸ್ಕಾರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೊರೊನಾ ದೇಶವನ್ನು ಕಾಡುತ್ತಿರುವಾಗ, ಜನರು ಸಾಯುತ್ತಿರುವಾಗ ನೀವು ಲೂಟಿ ಹೊಡೆಯಲು ಸಹಕಾರ ಕೊಡಬೇಕೇ..!
ಭ್ರಷ್ಟಾಚಾರ, ಅವ್ಯವಹಾರದ ವಿಚಾರವನ್ನು ಜನರಿಗೆ ತಿಳಿಸದೇ ಹೋದರೆ ನಮ್ಮ ಕರ್ತವ್ಯದಿಂದ ಜನದ್ರೋಹಿಗಳಾಗುತ್ತೇವೆ. ಇಂತಹ ಭ್ರಷ್ಟ ಸರ್ಕಾರ ಕನಾಟಕದಲ್ಲಿ ಯಾವತ್ತೂ ಬಂದಿರಲ್ಲಿಲ್ಲ. ಇದನ್ನು ಭ್ರಷ್ಟಾಚಾರದ ವಾಸನೆ ಅನ್ನದೆ, ಭ್ರಷ್ಟಾಚಾರದ ಸುವಾನಸೆ ಎನ್ನಲೇ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಿದ ಲೆಕ್ಕ ಹೀಗಿದೆ..
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ 4167 ಕೋಟಿ ಖರ್ಚು ಮಾಡಿದೆ. ಯಾವ ಯಾವ ಇಲಾಖೆಗಳ ಮೂಲಕ ಖರ್ಚಾಗಿರುವ ಹಣದ ವಿವರವನ್ನು ಸಿದ್ದರಾಮಯ್ಯ ನೀಡಿದ್ದಾರೆ
ಆರೋಗ್ಯ ಇಲಾಖೆ : 700 ಕೋಟಿ ರೂ. ಖರ್ಚು
ಬಿಬಿಎಂಪಿ-ಸ್ಥಳೀಯ ಸಂಸ್ಥೆಗಳು: 200 ಕೊಟಿ ರೂ.
ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು: 762 ಕೋಟಿ ರೂ.
ಕಾರ್ಮಿಕ ಇಲಾಖೆ : 1000 ಕೋಟಿ ರೂ.
ವೈದ್ಯಕೀಯ ಶಿಕ್ಷಣ ಇಲಾಖೆ: 815 ಕೋಟಿ ರೂ.
ಸಮಾಜ ಕಲ್ಯಾಣ ಇಲಾಖೆ: 500 ಕೋಟಿ ರೂ.
ಕೋವಿಡ್ ಆರೈಕೆ ಕೇಂದ್ರ, ಉಪಕರಣ ಖರೀದಿಗೆ: 160 ಕೋಟಿ ರೂ.
ಕೇಂದ್ರ ಸರ್ಕಾರ ವೈದ್ಯಕೀಯ ನೆರವಿಗಾಗಿ ಕೊಟ್ಟಿದ್ದು-50 ಕೋಟಿಗೂ ಹೆಚ್ಚು
ಒಟ್ಟು 4167 ಕೋಟಿ ರೂ.ಗೂ ಹೆಚ್ಚು ವೆಚ್ಚ.
ವೆಂಟಿಲೇಟರ್ ಖರೀದಿಯಲ್ಲೂ ಭಾರಿ ಅವ್ಯವಹಾರ..!
ಕೇಂದ್ರ ಸರ್ಕಾರವೇ ನಾಲ್ಕು ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿ ರಾಜ್ಯಗಳಿಗೆ ಕೊಟ್ಟಿದೆ. ಆದರೆ ರಾಜ್ಯ ಸರ್ಕಾರ 18 ಲಕ್ಷಕ್ಕೂ ಹೆಚ್ಚು ನೀಡಿ ವೆಂಟಿಲೇಟರ್ ಖರೀದಿ ಮಾಡಿದ್ದಾರೆ.
ಪಿಪಿಇ ಕಿಟ್ ಖರೀದಿಯಲ್ಲೂ ಭಾರಿ ಅವ್ಯವಹಾರ
ಪಿಪಿಇ ಕಿಟ್-ಮಾರುಕಟ್ಟೆಯಲ್ಲಿ 330 ಇದೆ.
ಮಹಾರಾಷ್ಟ್ರದ ದರ್ಜಿ ಕಂಪನಿಂದ 3.5 ಲಕ್ಷ ಕಿಟ್ ಖರೀದಿ
1117 ರೂ. ಕೊಟ್ಟು ಪಿಪಿಇ ಕಿಟ್ ಖರೀದಿ .
ಮಾಸ್ಕ್ ಖರೀದಿಯಲ್ಲಿ ಲೂಟಿ
10 ಲಕ್ಷ ಖರೀದಿ-ಮಾರುಕಟ್ಟೆಯಲ್ಲಿ 50ರಿಂದ 60 ರೂ. ಇದೆ
120ರಿಂದ 156 ರೂ. ಕೊಟ್ಟು ಖರೀದಿ
ಥರ್ಮಲ್ ಸ್ಕ್ಯಾನರ್ ಖರೀದಿಯಲ್ಲೂ ಭ್ರಷ್ಟಾಚಾರ
ಥರ್ಮಲ್ ಸ್ಕ್ಯಾನರ್-ಮಾರುಕಟ್ಟೆ ಬೆಲೆ 1200-2000 ರೂ.
5945 ರೂ. ಕೊಟ್ಟು ಸ್ಕಾನರ್ ಕೊಟ್ಟು ಸರ್ಕಾರ ಖರೀದಿ
ಸ್ಯಾನಿಟೈಸರ್ ಖರೀದಿಯಲ್ಲಿ ಲುಟಿ
500 ಎಂಲ್ ಸ್ಯಾನಿಟೈಸ್ ಖರೀದಿ
ಮಾರುಕಟ್ಟೆ ದರ -80ರಿಂದ 100 ರೂ
250 ರೂ. ಕೊಟ್ಟು ಸ್ಯಾನಿಟೈಸರ್ ಖರೀದಿ