ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ 20 ಸಾವಿರ ದಂಡ ವಿಧಿಸಿದ ಮಂಗಳೂರು ಮಹಾನಗರ ಪಾಲಿಕೆ…
ಮಂಗಳೂರು ನಗರದ ಕಂಕನಾಡಿಯ ರಸ್ತೆ ಬದಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ನೌಕರನಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ 20,000 ರೂ. ದಂಡ ವಿಧಿಸಲಾಗಿದೆ.
ಕಂಕನಾಡಿ ಬಳಿಯ ರಸ್ತೆಯಲ್ಲಿ ಈ ಹಿಂದೆ ಕಸ ಎಸೆದು ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿತ್ತು. ಆ ಪ್ರದೇಶವನ್ನು ಕೆಲ ದಿನಗಳ ಹಿಂದೆ ಸ್ವಚ್ಚಗೊಳಿಸಿ ಪಾಲಿಕೆಯು ಸಂದರಗೊಳಿಸಿತ್ತು. ಬಳಿಕ ಕಸ ಎಸೆಯುವು
ದು ನಿಯಂತ್ರಣಕ್ಕೆ ಬಂದಿದ್ದರೂ ಕೆಲವು ದಿನಗಳಿಂದ ಕೆಲವೊಬ್ಬರು ಕಸ ಎಸೆಯುತ್ತಿದ್ದರು.
ಕಸ ಎಸೆಯುತ್ತಿದ್ದನ್ನ ಗಮನಿಸುತ್ತಿದ್ದ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ 20,000 ಸಾವಿರ ರೂ. ದಂಡ ವಿಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕರಾದ ಶಿವಲಿಂಗ , ರಕ್ಷಿತಾ, ಮಲೇರಿಯಾ ಮೇಲ್ವಿಚಾರಕರಾದ ಚಂದ್ರಹಾಸ್ ಉಪಸ್ಥಿತರಿದ್ದರು.








