ಯುಎಸ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಸುಮಿತ್ ನಗಾಲ್ ಅವರು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಅದ್ಭುತ ಆಟವನ್ನಾಡಿದ್ದ ಸುಮಿತ್ ನಗಾಲ್ ಅವರು 6-1, 6-3, 3-6, 6-1ರಿಂದ ಬ್ರಾಡ್ಲೆ ಕಲ್ಹಾನ್ ಅವರನ್ನು ಸೋಲಿಸಿದ್ರು.
ಎರಡನೇ ಸುತ್ತಿನಲ್ಲಿ ಸುಮಿತ್ ನಗಾಲ್ ಅವರು ಕಠಿಣ ಸವಾಲನ್ನು ಎದುರಿಸಬೇಕಿದೆ. ಟೂರ್ನಿಯ ಎರಡನೇ ಶ್ರೇಯಾಂಕಿತ ಆಸ್ಟ್ರೀಯಾದ ಡಾಮ್ನಿಕ್ ಥೀಮ್ ವಿರುದ್ಧ ಆಡಲಿದ್ದಾರೆ. ಇನ್ನು ಆಸ್ಟ್ರೀಯಾದ ಡಾಮ್ನಿಕ್ ಥೀಮ್ ಅವರು ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದ್ರು. ಡಾಮ್ನಿಕ್ ಅವರ ಎದುರಾಳಿ ಸ್ಪೇನ್ ನ ಜೌಮ್ ಮುನಾರ್ ಅವರು ಪಂದ್ಯದ ಎರಡು ಸೆಟ್‍ಗಳ ಬಳಿಕ ಹೊರ ನಡೆದ್ರು. ಹೀಗಾಗಿ ಡಾಮ್ನಿಕ್ ಅವರು ಸುಲಭವಾಗಿ ಮುನ್ನಡೆ ಸಾಧಿಸಿದ್ರು. ಡಾಮ್ನಿಕ್ ಅವರು 7-6, 6-3ರಿಂದ ಮುನ್ನಡೆಯಲ್ಲಿದ್ದರು.
ಕಳೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಡಾಮ್ನಿಕ್ ಥೀಮ್ ಅವರು ಫೈನಲ್ ಪ್ರವೇಶಿಸಿದ್ದರು. ಫೈನಲ್ ನಲ್ಲಿ ಡಾಮ್ನಿಕ್ ಅವರು ನೊವಾಕ್ ಜಾಕೊವಿಕ್ ವಿರುದ್ಧ ಸೋಲು ಅನುಭವಿಸಿದ್ದರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.









