IPL 2022 Auction : 590 ಆಟಗಾರರಿಗೆ ಫೈನಲ್ ಪಟ್ಟಿಯಲ್ಲಿ ಸ್ಥಾನ 2022 Player Auction list announced saaksha tv
ಐಪಿಎಲ್ 2022 ಮೆಗಾ ಹರಾಜು ಹಿನ್ನೆಲೆಯಲ್ಲಿ 1214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.
ಈ ಪೈಕಿ 590 ಕ್ರಿಕೆಟಿಗರನ್ನು ಬಿಸಿಸಿಐ ಹರಾಜಿಗೆ ಆಯ್ಕೆ ಮಾಡಿದೆ. ಇದರಲ್ಲಿ 228 ಮಂದಿ ಕ್ಯಾಪ್ಡ್ ಆಟಗಾರರಾಗಿದ್ದು, 355 ಅನ್ಕ್ಯಾಪ್ಡ್ ಆಟಗಾರರು, ಏಳು ಮಂದಿ ಅಸೋಸಿಯೇಟ್ ದೇಶದ ಮೂಲದವರಾಗಿದ್ದಾರೆ.
ಟೀಂ ಇಂಡಿಯಾದಿಂದ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಅಶ್ವಿನ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಶರ್ಮಾ ಮತ್ತು ಇತರರು ರೇಸ್ ನಲ್ಲಿದ್ದಾರೆ.
ಅದೇ ರೀತಿ ಅಫ್ಘಾನಿಸ್ತಾನದಿಂದ 17, ಆಸ್ಟ್ರೇಲಿಯಾದಿಂದ 47, ಬಾಂಗ್ಲಾದೇಶದಿಂದ 5, ಇಂಗ್ಲೆಂಡ್ನಿಂದ 24, ಐರ್ಲೆಂಡ್ನಿಂದ 5, ನ್ಯೂಜಿಲೆಂಡ್ನಿಂದ 24, ದಕ್ಷಿಣ ಆಫ್ರಿಕಾದಿಂದ 33, ಶ್ರೀಲಂಕಾದಿಂದ 23, ವೆಸ್ಟ್ ಇಂಡೀಸ್ನಿಂದ 34, ಜಿಂಬಾಬ್ವೆಯಿಂದ 1, ನಮೀಬಿಯಾದಿಂದ 3 , ನೇಪಾಳದಿಂದ ಒಬ್ಬರು, ಸ್ಕಾಟ್ಲೆಂಡ್ನಿಂದ ಇಬ್ಬರು ಮತ್ತು ಯುನೈಟೆಡ್ ಸ್ಟೇಟ್ಸ್ನಿಂದ ಒಬ್ಬರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟನೆ ಹೊರಡಿಸಿದ್ದಾರೆ.