ರಾಜ್ಯದಲ್ಲಿ ಇಂದು 20,378 ಹೊಸ ಕೊರೊನಾ ಕೇಸ್ ಪತ್ತೆ
ಬೆಂಗಳೂರು : ರಾಜ್ಯದಲ್ಲಿ ಇಂದು 20,378 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು ಮಹಾಮಾರಿಗೆ 382 ಜನ ಸಾವನ್ನಪ್ಪಿದ್ದು, 28,053 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಸದ್ಯ 3,42,010 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಪತ್ತೆಯಾಗಿರುವ 20,378 ಹೊಸ ಕೇಸ್ ಗಳೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,87,827ಕ್ಕೆ ಏರಿಕೆಯಾಗಿದೆ. ಇನ್ನು 28,679 ಜನ ಸಾವನ್ನಪ್ಪಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.87ಕ್ಕೆ ಇಳಿಕೆಯಾಗಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಇಳಿಕೆಯಾಗಿದ್ದು, 4,734 ಜನಕ್ಕೆ ಸೋಂಕು ತಗುಲಿದೆ. ಇವತ್ತು 213 ಜನರು ಸಾವನ್ನಪ್ಪಿದ್ದಾರೆ. ಸದ್ಯ ನಗರದಲ್ಲಿ 1,62,625 ಸಕ್ರಿಯ ಪ್ರಕರಣಗಳಿವೆ. 6,078 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನುಳಿದಂತೆ ಬಾಗಲಕೋಟೆ 193, ಬಳ್ಳಾರಿ 598, ಬೆಳಗಾವಿ 1,171, ಬೆಂಗಳೂರು ಗ್ರಾಮಾಂತರ 392, ಬೆಂಗಳೂರು ನಗರ 4,734, ಬೀದರ್ 37, ಚಾಮರಾಜನಗರ 402, ಚಿಕ್ಕಬಳ್ಳಾಪುರ 356, ಚಿಕ್ಕಮಗಳೂರು 671, ಚಿತ್ರದುರ್ಗ 805, ದಕ್ಷಿಣ ಕನ್ನಡ 727, ದಾವಣಗೆರೆ 698, ಧಾರವಾಡ 525, ಗದಗ 289, ಹಾಸನ 2,227, ಹಾವೇರಿ 206, ಕಲಬುರಗಿ 107, ಕೊಡಗು 271, ಕೋಲಾರ 341, ಕೊಪ್ಪಳ 365, ಮಂಡ್ಯ 643, ಮೈಸೂರು 1,559, ರಾಯಚೂರು 278, ರಾಮನಗರ 164, ಶಿವಮೊಗ್ಗ 386, ತುಮಕೂರು 773, ಉಡುಪಿ 651, ಉತ್ತರ ಕನ್ನಡ 504, ವಿಜಯಪುರ 198 ಮತ್ತು ಯಾದಗಿರಿಯಲ್ಲಿ 107 ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿವೆ.