21 ವರ್ಷ ಆಕೆಯನ್ನ ಪೀಡಿಸಿದ ಪಾಗಲ್ ಪ್ರೇಮಿ ಕೊನೆಗೆ ಮಾಡಿದ್ದೇನು..!
ಉತ್ತರಪ್ರದೇಶ: 21 ವರ್ಷಗಳ ಕಾಲ ಆಕೆ ಹಿಂದೆ ಪ್ರೀತಿ ಪ್ರೇಮ ಎಂದು ಹುಚ್ಚನಂತೆ ಅಲೆದಾಡಿದ ಪಾಗಲ್ ಪ್ರೇಮಿ ಆಕೆಗೆ ಕೊಟ್ಟ ಟಾರ್ಚರ್ ಒಂದೆರೆಡಲ್ಲ. ಅದೆಲ್ಲಾ ಸಾಲದಕ್ಕೆ ಕೊನೆಗೆ ಆಕೆಯ ಜೀವವನ್ನೇ ತೆಗೆದಿದ್ದಾನೆ. ಉತ್ತರ ಪ್ರದೇಶದ ಫಿಲಿಭಿತ್ ನಲ್ಲಿನ ಕಾಲೇಜೊಂದರಲ್ಲಿ ಓದುತ್ತಿದ್ದಾಗ 21 ವರ್ಷದವಳಾಗಿದ್ದ ಯುವತಿಯೊಬ್ಬಳ ಮೇಲೆ ಅದೇ ಕಾಲೇಜಿನ ಕ್ಲರ್ಕ್ ರಮೇಶ್ ಎಂಬಾತನಿಗೆ ಲವ್ ಆಗಿತ್ತು. ತನ್ನ ಪ್ರೀತಿಸುವಂತೆ ಆಕೆಯನ್ನ ಪೀಡಿಸಿದ್ದ. ಕೊಎನೆಗೆ ಆಕೆಯೂ ಸಹ ಅವನನ್ನ ಇಷ್ಟ ಪಡೋಕೆ ಶುರುಮಾಡಿದ್ದಳು. ಇಬ್ಬರು ಓಡಾಟ , ಸುತ್ತಾಟ ಶುರುಮಾಡಿದ್ರು. ಅಷ್ಟರಲ್ಲೇ ರಮೇಶ್ ನ ಅಸಲಿಯತ್ತು ಬಯಲಾಗಿತ್ತು.
ನವವಿವಾಹಿತೆ ಮೇಲೆ ಐವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಹೌದು ರಮೇಶ್ ಯುವತಿಯ ಜೊತೆಗಿನ ಖಾಸಗಿ ಪೋಟೋ, ವೀಡಿಯೋಗಳನ್ನ ತೆಗೆದುಕೊಂಡು ಆಕೆಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ. ಆತನ ನಿಜ ಬಣ್ಣ ಬಯಲಾಗ್ತಿದ್ದಂತೆ ಆತನಿಂದ ಯುವತಿ ದೂರಾಗಿದ್ದಳು. ಬಳಿಕ ಬೇರೊಬ್ಬನ ಜೊತೆಗೆ ಮದುವೆಯಾಗಿದ್ದಳು. ಆದರೆ ಅದಾದ ನಂತರವೂ ರಮೇಶ್ ಟಾರ್ಚರ್ ತಪ್ಪಿರಲಿಲ್ಲ. ಆಕೆಗೆ ಪ್ರತಿ ನಿತ್ಯ ಕಿರುಕುಳ ನೀಡಲು ಆರಂಭಿಸಿದ್ದ. ಸಾಲದ್ದಕ್ಕೆ ಆಕೆಯ ಜೊತೆಗಿನ ಖಾಸಗಿ ಫೋಟೋವನ್ನ ಆಕೆಯ ಪತಿಗೂ ಕಳುಹಿಸಿದ್ದಾನೆ. ಇದಾದ ನಂತರ ಆಕೆಯ ಪತಿ ಸಹ ಡಿವೋರ್ಸ್ ಕೊಟ್ಟಿದ್ದ. ಬಳಿಕ ಆಕೆ ತವರು ಮನೆ ಸೇರಿದ್ದಳು. ಅಲ್ಲೂ ಸಹ ಆಕೆಯನ್ನ ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ. ಅದ್ರಲ್ಲೂ ಅವಳ ತಂದೆ ಮೃತಪಟ್ಟ ಬಳಿಕ ಆಕೆಯ ಮನೆಗೆ ಪ್ರತಿದಿನ ಬರಲಾರಂಭಿಸಿದ್ದ. ಹೀಗೇ ಬರುತ್ತಿದ್ದವ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ ಆತನ ಸ್ನೇಹಿತರನ್ನೂ ಕರೆತಂದು ಆಕೆಯ ಮೇಲೆ ಅತ್ಯಚಾರ ಮಾಡಿಸಿದ್ದಾರೆ. ಇದೆಲ್ಲದಕ್ಕೂ ಮೀರಿ ಆಕೆಯ ತಾಯಿ ಮನೆಯಲ್ಲಿ ಇಲ್ಲದ ಸಮಯ ನೋಡಿ ಆಕೆಯನ್ನ ಕೊಲೆಮಾಡಿದ್ದಾನೆ. ಇದೀಗ ಆಕೆಯ ತಾಯಿ ರಮೇಶ್ ಹಾಗೂ ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಆಧರಿಸಿರುವ ಪೊಲೀಸರು ರಮೇಶ್ ಹಾಗೂ ಆತನ ಸ್ನೇಹಿತರ ಸೆರೆಗೆ ಬಲೆ ಬೀಸಿದ್ದಾರೆ. ಅದೇನೇ ಇರಲಿ ನಿಜವಾದ ಪ್ರೀತಿಗಾಗಿ ಪ್ರಾಣ ಕೊಡೋಕು ತಯಾರಾಗಿರಬೇಕು ಅನ್ನುತ್ತಾರೆ. ಆದ್ರೆ ಈ ಹುಚ್ಚ 21 ವರ್ಷಗಳ ಕಾಲ ಪ್ರೀತಿ ಮಾಡಿ ಪ್ರತಿ ನಿತ್ಯ ಆಕೆಗೆ ಹಿಂಸೆ ಕೊಡುತ್ತಲೇ ಆಕೆಯ ಜೀವನವನ್ನೇ ನಾಶ ಮಾಡಿದ್ದಲ್ಲದೇ ಪ್ರಾಣವನ್ನೇ ತೆಗೆದು ಕ್ರೂರತ್ವ ಮೆರೆದಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








