ಬೆಂಗಳೂರು: ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮೇಘಾಲಯ ಹಾಗೂ ಪಂಜಾಬ್ ಸೇರಿದಂತೆ 22 ರಾಜ್ಯಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ (ED Raid) ನಡೆಸಿದ್ದು, ಅಪಾರ ಪ್ರಮಾಣದ ಹಣ ಸೀಜ್ ಮಾಡಿದ್ದಾರೆ.
ಚೆನ್ನೈ (Chennai) ಮೂಲದ ಸ್ಯಾಂಟಿಯಾಗೊ ಮಾರ್ಟಿನ್ (Santiago Martin) ಅವರ ಸಂಸ್ಥೆ ಫ್ಯೂಚರ್ ಗೇಮಿಂಗ್ ಹಾಗೂ ಹೋಟೆಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಇತರ ಸಹವರ್ತಿಗಳ ಮನೆಗಳ ಮೇಲೆ ದಾಳಿ ನಡೆದಿದೆ.
ದಾಳಿ ವೇಳೆ 12.41 ಕೋಟಿ ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಅಕೌಂಟ್ ಹಾಗೂ ಎಫ್ಡಿ ಸೇರಿ 6.42 ಕೋಟಿ ರೂ. ಹಣವನ್ನು ಫ್ರೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.