ಹರಿಯಾಣ: ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದ ಯುವತಿಯೊಬ್ಬಳು ತನ್ನ ಸ್ನೇಹಿತೆಯ ಜೊತೆಗೆ ಜಾಲಿರೈಡ್ ಗೆ ಹೋಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.
22 ವರ್ಷದ ಅನು ಮೃತದುರ್ದೈವಿಯಾಗಿದ್ದು, ಸ್ನೇಹಿತೆಯ ಎಡವಟ್ಟೇ ಇದಕ್ಕೆ ಕಾರಣ ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
ವೇಗವಾಗಿ ಬೈಕ್ ಚಾಲನೆ ಮಾಡಿದ್ದೆ ಈ ದುರ್ಘಟನೆಗೆ ಕಾರಣ ಎಂದು ಮೃತ ಅನು ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ ದೂರಿನ ಅನ್ವಯ ಅನು ಸ್ನೇಹಿತೆ ಉಸ್ಮಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೈಕಿನಲ್ಲಿ ಅನು ಉಸ್ಮಾನ್ ಜೊತೆಗೆ ಹೋಗಿದ್ದಾಳೆ. ಈ ವೇಳೆ ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದು, ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ನೋಡದೆ ಅದರ ಮೇಲೆ ಬೈಕ್ ಹಾರಿಸಿದ್ದಾಳೆ.
ಆಗ ಆಯ ತಪ್ಪಿ ಅನು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಅಷ್ಟರಲ್ಲಾಗ್ಲೇ ಯುವತಿ ಮೃತಪಟ್ಟಿದ್ದಳು. ಭಾನುವಾರ ರಾತ್ರಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು.
ಈ ಸಂಬಂಧ ಪಂಚಕುಲ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.








