ಒಂದಲ್ಲ.. ಎರೆಡಲ್ಲ.. 11 ಜನರನ್ನು ಮದುವೆಯಾಗಿ ಕೈಕೊಟ್ಟ 23 ವರ್ಷದ ಯುವಕ.. ಪೊಲೀಸರ ಅತಿಥಿಯಾಗಿದ್ದು ಹೇಗೆ ಗೊತ್ತಾ..!
ಚೆನ್ನೈ : 23 ವರ್ಷದ ಯುವಕನೋರ್ವ ಪ್ರೀತಿ ಪ್ರೇಮದ ಹೆಸರಿನಲ್ಲಿ ಬರೋಬ್ಬರಿ 11 ಜನರನ್ನು ಮದುವೆಯಾಗಿ ಮೋಸ ಮಾಡಿದ್ದಾನೆ. ಇಂತಹದೊಂದು ಘಟನೆ ತಮಿಳುನಾಡಿನ ವಿಲ್ಲುವಾಕಂ ನಡೆದಿದೆ. ಹುಡುಗಿಯರನ್ನು ಪ್ರೀತಿ ಹೆಸರಲ್ಲಿ ನಂಬಿಸಿ ಮದುವೆಯಾಗಿ ಅವರೊಂದಿಗೆ ದೈಹಿಕ ಸಂಬಂಧ ಬೆಳಸಿ ಬಳಿಕ ಅವರಿಗೆ ಕೈಕೊಡುವುದನ್ನೇ ಕಸುಬನ್ನಾಗಿಸಿಕೊಂಡಿದ್ದ. ಇದೇ ರೀತಿ ಈತನ ಮೋಸಕ್ಕೆ 11 ಯುವತಿಯರು ಸಿಲುಕಿ ಜೀವನ ನಾಶ ಮಾಡಿಕೊಂಡಿದ್ದಾರೆ.
ಭಾರತೀಯರಿಗೆ ಮನೆಯಲ್ಲೇ ಕುಳಿತು ಯುಎಸ್ ಬ್ಯಾಂಕ್ ಖಾತೆಯನ್ನು ತೆರೆಯುವ ಅವಕಾಶ
ಗಣೇಶ್ ಎಂಬಾತ ಅಸಲಿ ಮುಖವಾಡ ಬಯಲಾಗಿದ್ದು, 20 ವರ್ಷದ ಕೊಳತ್ತೂರು ಮೂಲದ ಯುವತಿ ಈತನಿಂದ ಮೋಸ ಹೋಗಿ ಬಳಿಕ ದೂರು ದಾಖಲಿಸಿದ ನಂತರ. ಈತ ಯುವತಿಯನ್ನ ಪ್ರೀತಿಸುವ ನಾಟಕವಾಡಿ ಕಳೆದ ವರ್ಷ ಡಿಸೆಂಬರ್ 5ರಂದು ಯುವತಿಯನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿದ್ದ. ಬಳಿಕ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ವಿಷಯ ತಿಳಿದ ಗಣೇಶ್, ಅತ್ತೆಯಿಂದ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದ. ಪೊಲೀಸರು ಎರಡೂ ಕಡೆಯುವರನ್ನು ಠಾಣೆಗೆ ಕರೆಸಿ ರಾಜೀ ಪಂಚಾಯ್ತಿ ಮಾಡಿದ್ದಾರೆ. ಈ ವೇಳೇ ಯುವತಿ ತನ್ನ ಪೋಷಕರ ಬಳಿ ಹೋಗಲು ನಿರಾಕರಿಸಿದ್ದಾಳೆ. ನಂತರ ಗಣೇಶ್ ತನ್ನ ಪತ್ನಿಯೊಂದಿಗೆ ವಿಲ್ಲಿವಾಕ್ಕಂನಲ್ಲಿ ಮನೆ ಯೊಂದನ್ನು ಬಾಡಿಗೆ ಪಡೆದು ವಾಸ ಮಾಡಲು ಶುರು ಮಾಡಿದ್ದಾನೆ. ಕೆಲವು ದಿನಗಳ ನಂತರ ಗಣೇಶ್, ಒಬ್ಬ ಯುವತಿಯನ್ನು ಮನೆ ಕೆಲಸ ಮಾಡಲು ಕರೆ ತಂದಿದ್ದಾನೆ. ಆದ್ರೆ ಇದು ಆತನ ಪತ್ನಿಗೆ ಇಷ್ಟವಿರಲಿಲ್ಲ. ಆದರು ಈ ಬಗ್ಗೆ ಗಣೇಶ್ ತಲೆ ಕೆಡಿಸಿಕೊಂಡಿರಲಿಲ್ಲ.
ರಾಮಮಂದಿರ ನಿರ್ಮಾಣಕ್ಕೆ ಪುಟ್ಟ ಪೋರಿಯ ಶ್ರೀರಾಮ ಸೇವೆ..!
ಇದರಿಂದಾಗಿ ಇಬ್ಬರ ನಡುವೆ ಜಗಳವೂ ಆಗಿದೆ. ಬಳಿಕ ಪ್ರತಿನಿತ್ಯ ಗಣೇಶ್ ಪತ್ನಿಗೆ ಹಿಂಸಿಸಲು ಶುರುಮಾಡಿದ್ದಾನೆ. ಅಲ್ಲದೇ ಮನೆಕೆಲಸದಾಕೆ ಜೊತೆಗೆ ಮತ್ತೊಂದು ಕೋಣೆಯಲ್ಲಿ ಮಲಗಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲ ಸ್ನೇಹಿತರನ್ನು ಕರೆತಂದು ಮನೆಯಲ್ಲಿ ಮದ್ಯ ಸೇವಿಸುತ್ತಿದ್ದ ಎನ್ನಲಾಗಿದೆ. ಹೀಗೆ ಒಂದು ದಿನ ಗಣೇಶ್ ನ ಸ್ನೇಹಿತನೊಬ್ಬ ಆತನ ಪತ್ನಿ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು, ಇದೇ ವಿಚಾರಕ್ಕೆ ಹೆದರಿದ ಆಕೆ ಅಲ್ಲಿಂದ ತಪ್ಪಿಸಿಕೊಂಡಿದ್ದಾಲೆ. ತಾನು ವಾಸವಿದ್ದ ಮನೆಯ ಮಾಲೀಕನ ನೆರವಿನಿಂದ ತವರು ಮನೆ ಸೇರಿದ್ದಾಳೆ. ಬಳಿಕ ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.
ಕೊರೋನಾ ಬಿಕ್ಕಟ್ಟಿನ ನಡುವೆ ಪಾಕಿಸ್ತಾನಕ್ಕೆ ಚೀನಾದಿಂದ ದೊಡ್ಡ ಹೊಡೆತ
ಪತ್ನಿಯ ದೂರನ್ನ ಆಧರಿಸಿ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಈತನ ನಿಜಬಣ್ಣ ಬಯಲಾಗಿದ್ದು, ಪೊಲೀಸರು ಮತ್ತು ಪತ್ನಿಯನ್ನ ಬೆಚ್ಚಿ ಬೀಳಿಸಿದೆ. ಈತ ಇದುವರೆಗೂ ಒಟ್ಟು 11 ಹುಡುಗಿಯರನ್ನು ಮದುವೆಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಗಣೇಶ್ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








