ಬೆಂಗಳೂರು bangalore ನಗರದಲ್ಲಿ ಇಂದು 23,746 ಕೋವಿಡ್ ಕೇಸ್ ಪತ್ತೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ನಗರದಲ್ಲಿಂದು 23,746 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ನಗರ ಪೂರ್ವದಲ್ಲಿ- 3,460, ಮಹದೇವಪುರ- 3,396, ಬೊಮ್ಮನಹಳ್ಳಿ- 2,309, ದಕ್ಷಿಣ ವಲಯ- 2,982, ಪಶ್ಚಿಮ ವಲಯ- 2,305,
ಯಲಹಂಕ- 1,948, ಆರ್ ಆರ್ ನಗರ- 1,869, ದಾಸರಹಳ್ಳಿ- 837 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ನಗರದಲ್ಲಿ 9 ವರ್ಷದೊಳಗಿನ 715 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ.
10-19 ವರ್ಷದ 1,472 ಮಂದಿಗೆ, 20-29 ವರ್ಷದ 5,152 ಹಾಗೂ 70 ವರ್ಷ ಮೇಲ್ಪಟ್ಟ 1,092 ಮಂದಿ ಸೋಂಕಿಗೆ ಒಳಪಟ್ಟಿದ್ದಾರೆ.










