ನೆಲಮಂಗಲ: ರೈಲಿಗೆ ಸಿಲುಕಿದ ಪರಿಣಾಮ 24 ಮೇಕೆಗಳು ಭೀಕರವಾಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಚಿಕ್ಕಮಾರನಹಳ್ಳಿ (Chikkamaranahalli) ಹತ್ತಿರ ನಡೆದಿದೆ.
ಚಿಕ್ಕಮಾರನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಎಂಬುವವರಿಗೆ ಸೇರಿದ್ದ 24 ಮೇಕೆಗಳು ಇಂದು ಸಾವನ್ನಪ್ಪಿವೆ. ಸಂಜೆ ರೈಲೊಂದು ಹಾಸನದಿಂದ (Hassan) ಬೆಂಗಳೂರಿಗೆ (Bengaluru) ತೆರಳುತ್ತಿದ್ದ ವೇಳೆ ರೈಲು ಹಳಿಯ ಮೇಲೆ ಮೇಕೆಗಳ ದಂಡು ಓಡಿ ಹೋಗಿದೆ. ಪರಿಣಾಮ 24 ಮೇಕೆಗಳು ಸಾವನ್ನಪ್ಪಿವೆ. 4 ಲಕ್ಷ ರೂ. ಮೌಲ್ಯದ 24 ಮೇಕೆಗಳು ದಾರುಣವಾಗಿ ಸಾವನ್ನಪ್ಪಿವೆ. ಮೇಕೆಗಳ ಸಾವಿನಿಂದಾಗಿ ರೈತ ವೆಂಕಟಪ್ಪ ಕಂಗಾಲಾಗಿದ್ದಾರೆ.








