ADVERTISEMENT
Thursday, March 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಅಪರಾಧ

25 ದಿನ, 150 ಕೋಟಿ ಲೂಟಿ: ದೇಶವನ್ನೇ ನಡುಗಿಸಿದ ಸೈಬರ್ ಜಾಲ, ದಾವಣಗೆರೆಯಲ್ಲಿ ಕಿಂಗ್‌ಪಿನ್ ಸೆರೆ!

25 days, 150 crores looted: Cyber ​​network that shook the country, kingpin arrested in Davangere!

Shwetha by Shwetha
October 13, 2025
in ಅಪರಾಧ, Crime, Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ದಾವಣಗೆರೆ: ಕೇವಲ 25 ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳ ನೂರಾರು ಜನರ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 150 ಕೋಟಿ ರೂಪಾಯಿ ದೋಚಿದ್ದ ಬೃಹತ್ ಸೈಬರ್ ವಂಚನಾ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆ ಬೇಲೂರಿನ ಸಿಸಿ ಕ್ಯಾಮರಾ ಟೆಕ್ನಿಷಿಯನ್ ಸಯ್ಯದ್ ಅರ್ಫಾತ್ (28) ಬಂಧಿತನಾಗಿದ್ದು, ಈತನ ಬಂಧನದಿಂದ ರಾಷ್ಟ್ರವ್ಯಾಪಿ ಹಬ್ಬಿದ್ದ ಆನ್‌ಲೈನ್ ದರೋಡೆಯ ಭಯಾನಕ ಜಾಲವೊಂದು ಬೆಳಕಿಗೆ ಬಂದಿದೆ.

ದಾವಣಗೆರೆಯ ದೂರುದಾರನಿಂದ ಬಯಲಾದ ಸತ್ಯ

Related posts

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

March 19, 2026
ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

March 19, 2026

ಈ ಬೃಹತ್ ಜಾಲ ಪತ್ತೆಯಾಗಲು ಕಾರಣವಾಗಿದ್ದು ದಾವಣಗೆರೆಯಲ್ಲಿ ನಡೆದ ಒಂದು ವಂಚನೆ ಪ್ರಕರಣ. ನಗರದ ನಿಟುವಳ್ಳಿ ನಿವಾಸಿ ಎಚ್.ಎಸ್. ಪ್ರಮೋದ್ ಅವರ ಕೆನರಾ ಬ್ಯಾಂಕ್ ಖಾತೆ ಆಗಸ್ಟ್ 14 ರಂದು ದಿಢೀರ್ ಬ್ಲಾಕ್ ಆಗಿತ್ತು. ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ತಾಂತ್ರಿಕ ಕಾರಣದಿಂದ ಹೀಗಾಗಿದ್ದು, ಐದು ದಿನಗಳಲ್ಲಿ ಸರಿಹೋಗುತ್ತದೆ ಎಂದು ತಿಳಿಸಿದ್ದರು. ಆದರೆ ಆಗಸ್ಟ್ 25 ರಂದು ಪ್ರಮೋದ್ ಅವರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ, ಅದರಲ್ಲಿ ಕೇವಲ 4,956 ರೂಪಾಯಿ ಉಳಿದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.

ತಮ್ಮ ಖಾತೆಯಿಂದ ಬರೋಬ್ಬರಿ 52,60,523 ರೂಪಾಯಿ ಮಾಯವಾಗಿರುವುದನ್ನು ಕಂಡು ತಕ್ಷಣ ಬ್ಯಾಂಕ್ ವ್ಯವಸ್ಥಾಪಕರನ್ನು ವಿಚಾರಿಸಿದಾಗ, ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆಯಾಗಿರುವ ಮಾಹಿತಿ ಲಭಿಸಿದೆ. ತಾನು ಯಾವುದೇ ವ್ಯವಹಾರ ನಡೆಸಿಲ್ಲವೆಂದು ಅರಿತ ಪ್ರಮೋದ್, ತಕ್ಷಣವೇ ದಾವಣಗೆರೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದರು.

ಪೊಲೀಸರ ಚಾಣಾಕ್ಷ ತನಿಖೆ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರ ತಂಡ, ತನಿಖೆ ಆರಂಭಿಸಿತು. ಹಣ ವರ್ಗಾವಣೆ ಮಾಡಲು ಬಳಸಲಾಗಿದ್ದ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ, ಆ ಸಂಖ್ಯೆ ಹಾಸನದ ಬೇಲೂರಿನಲ್ಲಿ ಸಕ್ರಿಯವಾಗಿರುವುದು ತಿಳಿಯಿತು. ತಕ್ಷಣ ಕಾರ್ಯಪ್ರವೃತ್ತರಾದ ತಂಡ, ಸಿಸಿ ಕ್ಯಾಮರಾ ಕೆಲಸಗಾರನ ಸೋಗಿನಲ್ಲಿದ್ದ ಸಯ್ಯದ್ ಅರ್ಫಾತ್‌ನನ್ನು ಬಂಧಿಸಿತು. ಆತನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ, ಪೊಲೀಸರೇ ದಂಗಾಗುವಂತಹ ಸತ್ಯಗಳು ಹೊರಬಿದ್ದವು.

ಮೊದಲಿಗೆ, ದಾವಣಗೆರೆ ನ್ಯಾಯಾಲಯದ ಆದೇಶದ ಮೇರೆಗೆ, ಪೊಲೀಸರು ಪ್ರಮೋದ್ ಅವರಿಗೆ ಕಳೆದುಹೋಗಿದ್ದ 52,60,400 ರೂಪಾಯಿಗಳನ್ನು ಮರಳಿ ಕೊಡಿಸುವಲ್ಲಿ ಯಶಸ್ವಿಯಾದರು.

ಬಯಲಾದ ರಾಷ್ಟ್ರವ್ಯಾಪಿ 150 ಕೋಟಿ ವಂಚನೆ ಜಾಲ

ಸಯ್ಯದ್ ಅರ್ಫಾತ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಇದೊಂದು ಸಣ್ಣಪುಟ್ಟ ವಂಚನೆಯಲ್ಲ, ಬದಲಿಗೆ ದೇಶದ ಹಲವು ರಾಜ್ಯಗಳಲ್ಲಿ ಬೇರುಬಿಟ್ಟಿರುವ ಬೃಹತ್ ಜಾಲ ಎಂಬುದು ಸ್ಪಷ್ಟವಾಯಿತು. ಆರೋಪಿಗಳ ಚಾಲ್ತಿ ಖಾತೆಯನ್ನು ಪರಿಶೀಲಿಸಿದಾಗ, ಜುಲೈ 27 ರಿಂದ ಆಗಸ್ಟ್ 19 ರವರೆಗಿನ ಕೇವಲ 25 ದಿನಗಳ ಅವಧಿಯಲ್ಲಿ ಸುಮಾರು 150 ಕೋಟಿ ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ.

ಈ ಜಾಲವು ಉತ್ತರ ಪ್ರದೇಶದ ಗಾಜಿಯಾಬಾದ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರಪ್ರದೇಶದ ಏಲೂರು, ಮಹಾರಾಷ್ಟ್ರದ ಮುಂಬೈ ಹಾಗೂ ಕರ್ನಾಟಕದ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ದಾಖಲಾದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದೆ.

132 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು?

ಆರೋಪಿಗಳು ತಮ್ಮ ಖಾತೆಗೆ ಜಮೆಯಾದ 150 ಕೋಟಿ ರೂಪಾಯಿಗಳಲ್ಲಿ, ಕಣ್ಣು ಮಿಟುಕಿಸುವುದರೊಳಗೆ 132 ಕೋಟಿ ರೂಪಾಯಿಗಳನ್ನು ವಿತ್‌ಡ್ರಾ ಮಾಡಿಕೊಂಡಿದ್ದಾರೆ. ಈ ಹಣವನ್ನು ಯಾರಿಗೆ ವರ್ಗಾಯಿಸಲಾಗಿದೆ ಅಥವಾ ಯಾವ ರೂಪದಲ್ಲಿ ಬಚ್ಚಿಡಲಾಗಿದೆ ಎಂಬುದು ಈಗ ತನಿಖೆಯ ಕೇಂದ್ರಬಿಂದುವಾಗಿದೆ. ಈ ಹಣ ಭಯೋತ್ಪಾದಕ ಚಟುವಟಿಕೆಗಳಿಗೆ ಅಥವಾ ಇತರ ದೇಶವಿರೋಧಿ ಕೃತ್ಯಗಳಿಗೆ ಬಳಕೆಯಾಗಿರುವ ಶಂಕೆಯನ್ನೂ ಪೊಲೀಸರು ತಳ್ಳಿಹಾಕಿಲ್ಲ.

ಪ್ರಸ್ತುತ ಆರೋಪಿಯ ಖಾತೆಯಲ್ಲಿದ್ದ 18 ಕೋಟಿ ರೂಪಾಯಿಗಳನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಸದ್ಯಕ್ಕೆ ಬಂಧಿತ ಸಯ್ಯದ್ ಅರ್ಫಾತ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾವಣಗೆರೆ ಪೊಲೀಸರ ಈ ಕಾರ್ಯಾಚರಣೆ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.

ShareTweetSendShare
Join us on:

Related Posts

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

ಅಂತ್ಯಸಂಸ್ಕಾರಕ್ಕೆ ಜಾಗ ಹುಡುಕಿ ಸುಸ್ತಾದ ಸರ್ಕಾರ: ಖಾಸಗಿ ಭೂಮಿ ಖರೀದಿಯೇ ಏಕೈಕ ದಾರಿ ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಹಾಯಕತೆ!

by Shwetha
March 19, 2026
0

ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ...

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

ಅಂತರ್ಜಾತಿ ವಿವಾಹಕ್ಕೆ ರಕ್ಷಣೆ: ರಾಜ್ಯದಿಂದ ಹೊಸ ಕಾಯ್ದೆ ಸಿದ್ಧತೆ

by Shwetha
March 19, 2026
0

ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಸಿಗುವ ಸಾಧ್ಯತೆ ಹೆಚ್ಚಿದೆ. ಕುಟುಂಬಸ್ಥರಿಂದ ವಿರೋಧ, ಬಹಿಷ್ಕಾರ ಮತ್ತು ಕೆಲ ಸಂದರ್ಭಗಳಲ್ಲಿ ಹಿಂಸೆ ಅಥವಾ ಕೊಲೆಗಳ ಘಟನೆಗಳ...

ನಟಿ ತಮನ್ನಾಗೆ 5 ಕೋಟಿ ನೀಡಲು ದುಡ್ಡಿದೆ ವಿಧವೆಯರಿಗೆ ವೇತನ ನೀಡಲು ಆಗಲ್ವಾ ಸರ್ಕಾರದ ವಿರುದ್ಧ ಶರಣು ಸಲಗಾರ್ ಆಕ್ರೋಶ

ನಟಿ ತಮನ್ನಾಗೆ 5 ಕೋಟಿ ನೀಡಲು ದುಡ್ಡಿದೆ ವಿಧವೆಯರಿಗೆ ವೇತನ ನೀಡಲು ಆಗಲ್ವಾ ಸರ್ಕಾರದ ವಿರುದ್ಧ ಶರಣು ಸಲಗಾರ್ ಆಕ್ರೋಶ

by Shwetha
March 19, 2026
0

ಬೆಳಗಾವಿ: ರಾಜ್ಯ ಸರ್ಕಾರದ ಆದ್ಯತೆಗಳು ಮತ್ತು ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ಬಸವಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ್ ಅವರು ಸರ್ಕಾರದ...

ಲೈಕ್ಸ್ ಆಸೆಗೆ ಅಪ್ಪನ ಪ್ರಾಣದ ಜತೆ ಆಟ ಪ್ರ್ಯಾಂಕ್ ಹೆಸರಲ್ಲಿ ವಿಕೃತಿ :ಬೆಂಗಳೂರಿನ ಕೊರಿಯರ್ ಆಫೀಸ್ ನಲ್ಲಿ ರೀಲ್ಸ್ ಹುಚ್ಚರ ಹೈಡ್ರಾಮಾ

ಲೈಕ್ಸ್ ಆಸೆಗೆ ಅಪ್ಪನ ಪ್ರಾಣದ ಜತೆ ಆಟ ಪ್ರ್ಯಾಂಕ್ ಹೆಸರಲ್ಲಿ ವಿಕೃತಿ :ಬೆಂಗಳೂರಿನ ಕೊರಿಯರ್ ಆಫೀಸ್ ನಲ್ಲಿ ರೀಲ್ಸ್ ಹುಚ್ಚರ ಹೈಡ್ರಾಮಾ

by Shwetha
March 19, 2026
0

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಕಾಮೆಂಟ್ಸ್ ಗಿಟ್ಟಿಸಿಕೊಳ್ಳಲು ಇಂದಿನ ಯುವಪೀಳಿಗೆ ಯಾವ ಹಂತಕ್ಕೆ ಬೇಕಾದರೂ ಇಳಿಯಲು ಸಿದ್ಧರಿದ್ದಾರೆ ಎಂಬುದಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಂತಿದೆ....

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

by Shwetha
March 19, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ಒದಗಿಸಲು ₹104 ಕೋಟಿ ಬಿಡುಗಡೆ ಮಾಡಿದೆ. ಈ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram