ಯುಕೆಯಿಂದ ಕರ್ನಾಟಕಕ್ಕೆ ಹಿಂತಿರುಗಿದ 250 ಪ್ರಯಾಣಿಕರನ್ನು 48 ಗಂಟೆಗಳ ಒಳಗೆ ಪತ್ತೆ ಹಚ್ಚಲು ಆದೇಶ 250 passengers UK
ಬೆಂಗಳೂರು, ಡಿಸೆಂಬರ್30: ಯುನೈಟೆಡ್ ಕಿಂಗ್‌ಡಮ್ (ಯುಕೆ) ಯಿಂದ ಕರ್ನಾಟಕಕ್ಕೆ ಹಿಂತಿರುಗಿದ 250 ಪ್ರಯಾಣಿಕರನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. 48 ಗಂಟೆಗಳ ಒಳಗೆ ಅವರನ್ನು ಪತ್ತೆ ಹಚ್ಚುವಂತೆ ರಾಜ್ಯ ಗೃಹ ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 250 passengers UK

ಏತನ್ಮಧ್ಯೆ, ಯುಕೆ ಯಿಂದ ಭಾರತಕ್ಕೆ ಮರಳಿದ ಆರು ಜನರಲ್ಲಿ, ಹೊಸ ರೂಪಾಂತರಿತ ಕೊರೋನವೈರಸ್ ಸೋಂಕು ದೃಢಪಟ್ಟಿದೆ. ಅವರಲ್ಲಿ ಮೂವರು ಬೆಂಗಳೂರಿನವರು.
ಯುನೈಟೆಡ್ ಕಿಂಗ್‌ಡಂನಿಂದ ಜೈಪುರಕ್ಕೆ ಮರಳಿದ 17 ಜನರನ್ನು ಸಹ ರಾಜಸ್ಥಾನದ ಅಧಿಕಾರಿಗಳಿಗೆ ಪತ್ತೆಹಚ್ಚಲು
ಸಾಧ್ಯವಾಗಲಿಲ್ಲ. ಜೈಪುರದ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯುಕೆಯಿಂದ ಹಿಂದಿರುಗಿದವರ ಮಾದರಿಗಳನ್ನು ತೆಗೆದುಕೊಳ್ಳಲು ರಚಿಸಲಾದ ತಂಡಗಳು ಅವರ ವಿಳಾಸಕ್ಕೆ ತೆರಳಿದಾಗ ಅವರು ಅಲ್ಲಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 31ರಂದು ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆ
ದೆಹಲಿಯಲ್ಲಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸ ರೂಪಾಂತರಿತ ಕೊರೋನವೈರಸ್ ಹೊಸ ಎದುರಿಸಲು ರಾಷ್ಟ್ರೀಯ ರಾಜಧಾನಿ ಸಿದ್ಧವಾಗಿದೆ ಎಂದು ನಗರದ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ. ಪ್ರತಿ ದಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೂ, ನಾವು ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೀಗ ಹೊಸ ರೂಪಾಂತರಿತ ಕೊರೋನಾ ವೈರಸ್ ಅನ್ನು ಎದುರಿಸಲುಸಹ ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್, ಯುಕೆಯಲ್ಲಿ ಪತ್ತೆಯಾದ ಕೊರೋನವೈರಸ್ ನ ಹೊಸ ರೂಪಾಂತರವು ವೇಗವಾಗಿ ಹರಡುತ್ತಿದೆ ಎಂದು ಹೇಳಿದರು. ಪ್ರಸ್ತುತ ಲಸಿಕೆಗಳು ಇದರ ವಿರುದ್ಧ ಕಾರ್ಯನಿರ್ವಹಿಸುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದರು.

ಕಳೆದ 24 ಗಂಟೆಗಳಲ್ಲಿ ಯುಕೆ 40,000 ಹೊಸ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಇದು ಇತರ ದೇಶಗಳ ಕಳವಳಕ್ಕೆ ಕಾರಣವಾಗಿದೆ. ಯುಕೆಯಲ್ಲಿ ಕಂಡುಬಂದಿರುವ ಕೊರೋನವೈರಸ್ ನ ಹೊಸ ರೂಪಾಂತರವು ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಯುಕೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ರೂಪಾಂತರಗಳ ವಿರುದ್ಧ ಲಸಿಕೆಗಳು ಕಾರ್ಯನಿರ್ವಹಿಸುತ್ತವೆ. ಪ್ರಸ್ತುತ ಲಸಿಕೆಗಳು ಈ ಕೋವಿಡ್ -19 ರೂಪಾಂತರಗಳಿಂದ ರಕ್ಷಿಸುವಲ್ಲಿ ವಿಫಲವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಜಯ್ ರಾಘವನ್ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೆಮ್ಮು ಮತ್ತು ಶೀತಕ್ಕೆ ಕರಿಮೆಣಸಿನ ಮನೆಮದ್ದುಗಳುhttps://t.co/de4MVaoO42
— Saaksha TV (@SaakshaTv) December 29, 2020
ಕೇವಲ 42 ರೂ ಹೂಡಿಕೆ ಮಾಡಿ ಜೀವನ ಪರ್ಯಂತ ಪಿಂಚಣಿ ಪಡೆಯಿರಿ https://t.co/LFMWJSyHfU
— Saaksha TV (@SaakshaTv) December 29, 2020








