26/11 mumbai attack
26/11ರ ಮುಂಬೈ ದಾಳಿಯ ರುವಾರಿ ಹಫೀಜ್ ಜೈಲಿನಲ್ಲೇ ಇಲ್ಲ..!
2008 26/11ರಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಮುಂಬೈ ಉಗ್ರ ದಾಳಿ ನಡೆದು ಸರಿಯಾಗಿ 12 ವರ್ಷ ಕಳೆದಿವೆ. ಈ ದಾಳಿಯಲ್ಲಿ ಹಲವಾರು ಯೋಧರು, ಸಾರ್ವಜನಿಕರು ಜೀವ ಕಳೆದುಕೊಂಡಿದ್ದರು. ಈ ಪ್ರಕರಣದ ರೂವಾರಿಯಾಗಿದ್ದ ಉಗ್ರ ಹಫೀಜ್ ಪಾಕಿಸ್ತಾನದ ಜೈಲಿನಲ್ಲಿದ್ದಾನೆ ಎಂದು ನಂಬಿದ್ದ ಇಡೀ ವಿಶ್ವಕ್ಕೆ ಪಾಕ್ ಮಂಕು ಬೂದಿ ಎರಚಿರುವ ಸತ್ಯ ಇದೀಗ ಬಯಲಾಗಿದೆ.
ಹೌದು ಪಾಕಿಸ್ತಾನ ಉಗ್ರ ಪೋಷಿತ ರಾಷ್ಟ್ರ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಗುಪ್ತಚರ ಇಲಾಖೆ ಮಾಹಿತಿಯ ಪ್ರಕಾರ ಉಗ್ರ ಹಫೀಜ್ ಜೈಲಿನಲ್ಲಿಯೇ ಇಲ್ಲ ಎಂದು ತಿಳಿದುಬಂದಿದೆ. ಈ ಮೂಲಕ ನರಿ ಪಾಕ್ ನ ಅಸಲಿಯತ್ತು ಮತ್ತೊಮ್ಮೆ ಜಗತ್ತಿನ ಮುಂದೆ ಬಟಾ ಬಯಲಾಗಿದೆ.
ಅನ್ನದಾತರ ಕೂಗು ಕೇಂದ್ರಕ್ಕೆ ಕೇಳಿಸುತ್ತಿಲ್ಲ, ಕೇಳುವ ತಾಳ್ಮೆಯೂ ಇಲ್ಲ : ಪ್ರಿಯಾಂಕಾ ವಾದ್ರಾ..!
2019ರ ಜುಲೈಯಲ್ಲಿ ಹಫೀಜ್ ಬಂಧನಕ್ಕೆ ಒಳಗಾಗಿದ್ದ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಆತನಿಗೆ 10 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಅದೇ ವರ್ಷವೇ ಲಾಹೀರ್ ಕೋರ್ಟ್ ಆದೇಶಿತ್ತು. ಆದರೆ ಹಫೀಜ್ ಮಾತ್ರ ಜೈಲಿನಲ್ಲಿ ಇಲ್ಲದೇ ಲಾಹೋರ್ ನಲ್ಲಿರುವ ಮನೆಯಲ್ಲಿದ್ದಾನೆ ಎಂಬ ಸತ್ಯವನ್ನ ಗುಪ್ತಚರ ಇಲಾಖೆ ಬಿಚ್ಚಿಟ್ಟಿದೆ.
ಭದ್ರತಾ ಮಂಡಳಿಯ ನಿರ್ಬಂಧಕ್ಕೆ ಒಳಗಾಗಿರುವ ಉಗ್ರನನ್ನು ಜೈಲಿನಲ್ಲಿ ಇರಿಸದೆ ಪಾಕಿಸ್ತಾನ ಆತನ ಐಷಾರಾಮಿ ಜೀವನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಇಡೀ ಜಗತ್ತಿನ ಮುಂದೆ ತನ್ನ ಅಸಲಿ ಮುಖವನ್ನ ತೋರಿಸಿದೆ.
ಅಲ್ಲದೇ ಉಗ್ರ ಹಫೀಜ್ ಗೆ ಮನೆಯಲ್ಲಿಯೇ ಭದ್ರತೆಯನ್ನೂ ಸಹ ನೀಡಿದೆಯಂತೆ ಪಾಕಿಸ್ತಾನ. ವಿಧ್ವಂಸಕ ಕೃತ್ಯಕ್ಕೆ ರೂಪುರೇಷೆ ಮಾಡಲು ಆತನಿಗೆ ಭೇಟಿಯಾಗಲು ಉಗ್ರರೂ ಸೇರಿದಂತೆ ಇತರರಿಗೆ ಅವಕಾಶ ಕಲ್ಪಿಸಲಾಗಿದೆಯಂತೆ.
26/11 mumbai attack
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel