ಆಸ್ಟ್ರೇಲಿಯಾ ಪ್ರವಾಸಕ್ಕೆ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್. ಕೆ. ಪ್ರಸಾದ್ ಆಯ್ಕೆಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ ?
ಡಿಸೆಂಬರ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಐಪಿಎಲ್ ಮುಗಿದ ತಕ್ಷಣವೇ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದರೆ. ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ 14 ದಿನಗಳ ಕ್ವಾರಂಟೈನ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಇರಲೇಬೇಕು. ಕೋವಿಡ್ ಶಿಷ್ಟಚಾರ ಮತ್ತು ಮಾರ್ಗಸೂಚಿಗಳನ್ನು ಟೀಮ್ ಇಂಡಿಯಾ ಆಟಗಾರರು ಕಡ್ಡಾಯವಾಗಿ ಪಾಲಿಸಬೇಕು.
ಹೀಗಾಗಿ ಟೀಮ್ ಇಂಡಿಯಾ 26 ಆಟಗಾರರನ್ನು ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಬೇಕಾಗಿದೆ. ಜೈವಿಕ್ ಸುರಕ್ಷತೆಯೊಂದಿಗೆ ಈ ಸರಣಿ ನಡೆಯಲಿದೆ. ಈಗಾಗಲೇ ಇಂಗ್ಲೆಂಡ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ತಂಡ 26 ಆಟಗಾರರು ಮತ್ತು ಪಾಕಿಸ್ತಾನ 29 ಆಟಗಾರರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಈಗ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ,ಎಸ್.ಕೆ ಪ್ರಸಾದ್ ಮಾತನಾಡಿದ್ದಾರೆ.
ಇದು ಒಳ್ಳೆಯ ಯೋಚನೆ. ಟೀಮ್ ಇಂಡಿಯ ಕನಿಷ್ಠ ಅಂದ್ರೂ 26 ಆಟಗಾರರನ್ನು ಆಯ್ಕೆ ಮಾಡಬೇಕು. ಭಾರತ ತಂಡದ ಜೊತೆಗೆ ಭಾರತ ಎ ತಂಡದ ಆಟಗಾರರಿದ್ರೆ ಉತ್ತಮ. ಯಾಕಂದ್ರೆ ಕೋವಿಡ್-19 ಟೈಮ್ ನಲ್ಲಿ ನೆಟ್ಸ್ ಬೌಲರ್‍ಗಳನ್ನು ನಂಬಿಕೊಂಡಿರಲು ಸಾಧ್ಯವಿಲ್ಲ. ಕ್ವಾರಂಟೈನ್ ಟೈಮ್‍ನ ಅಭ್ಯಾಸದ ವೇಳೆ ಎರಡು ಗುಂಪುಗಳಾಗಿ ಮಾಡಿಕೊಂಡು ಅಭ್ಯಾಸ ನಡೆಸಬಹುದು ಎಂದು ಎಂ.ಎಸ್. ಕೆ. ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನ ಟೆಸ್ಟ್ ಸರಣಿಗಿಂತ ಮುನ್ನ ಐಪಿಎಲ್ ಟೂರ್ನಿಯೂ ನಡೆಯುತ್ತಿದೆ. ಚೇತೇಶ್ವರ ಪೂಜಾರ ಮತ್ತು ಹನುಮಾ ವಿಹಾರಿ ಬಿಟ್ಟು ಇನ್ನುಳಿದ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆದ್ರೆ ಟೆಸ್ಟ್ ಸರಣಿಗಿಂತ ಮುನ್ನ ಐಪಿಎಲ್ ಟೂರ್ನಿ ನಡೆಯುವುದು ಸೂಕ್ತವಲ್ಲ. ಆದ್ರೆ ಐಪಿಎಲ್ ಗೂ ಆದ್ಯತೆ ನೀಡಬೇಕಾಗುತ್ತದೆ. ಪೂರ್ವ ತಯಾರಿ ವಿಚಾರದಲ್ಲಿ ಹೇಳುವುದಾದ್ರೆ ಒಳ್ಳೆಯದಲ್ಲ ಎಂದು ಪ್ರಸಾದ್ ಹೇಳಿದ್ದಾರೆ.
ಇನ್ನು ಆಸ್ಟ್ರೇಲಿಯಾ ಸರಣಿಗೆ ಎಂ.ಎಸ್. ಕೆ. ಪ್ರಸಾದ್ 26 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಆಟಗಾರರ ಹೆಸರು ಈ ಕೆಳಗಿನಂತಿದೆ.
ಆರಂಭಿಕ ಆಟಗಾರರು – ರೋಹಿತ್ ಶರ್ಮಾ, ಮಯಾಂಕ್ ಅಗರ್‍ವಾಲ್, ಪೃಥ್ವಿ ಶಾ, ಕೆ.ಎಲ್. ರಾಹುಲ್
ಮಧ್ಯಮ ಕ್ರಮಾಂಕ – ವಿರಾಟ್ ಕೊಹ್ಲಿ (ನಾಯಕ), ಅಜ್ಯಂಕ್ಯಾ ರಹಾನೆ, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್
ವಿಕೆಟ್ ಕೀಪರ್ – ರಿಷಬ್ ಪಂತ್, ವೃದ್ಧಿಮಾನ್ ಶಾಹ
ಸ್ಪಿನ್ನರ್ಸ್ – ರವಿಚಂದ್ರ ಅಶ್ವಿನ್, ರವೀಂದ್ರ ಜಡೇಜಾ, ಶಹಬಾಝ್ ನದೀಮ್, ರಾಹುಲ್ ಚಾಹರ್, ಕುಲದೀಪ್ ಯಾದವ್
ಆಲ್ ರೌಂಡರ್ – ಹಾರ್ದಿಕ್ ಪಾಂಡ್ಯ
ವೇಗಿಗಳು – ಇಶಾಂತ್ ಶರ್ಮಾ, ಮಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ನವದೀಪ್ ಸೈನಿ, ಖಲೀಲ್ ಅಹಮ್ಮದ್. ಶ್ರಾದೂಲ್ ಥಾಕೂರ್.
ವೈಟ್ ಬಾಲ್‍ಗೆ – ದೀಪಕ್ ಚಾಹರ್, ಯುಜುವೆಂದ್ರ ಚಾಹಲ್, ಕೃನಾಲ್ ಪಾಂಡ್ಯ.