ದೇಶದಲ್ಲಿ 2,85 ಕೊರೊನಾ ಹೊಸ ಕೇಸ್ ಪತ್ತೆ Saakaha Tv
ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,85,194 ಕೊರೊನಾ Covid-19 ಪ್ರಕರಣಗಳು ಪತ್ತೆಯಾಗಿವೆ. ಪ್ರತಿದಿನದ ಏರಿಕೆ ಪ್ರಮಾಣವು 16.16 ರಷ್ಟಿದ್ದು, ವಾರದ ಏರಿಕೆ ಪ್ರಮಾಣವು 17.33 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ Union Health Department ಟ್ವೀಟ್ ಮಾಡಿದೆ.
ಇನ್ನೂ ಸಕ್ರೀಯ ಪ್ರಕರಣಗಳು 22,23,018 ಇದ್ದು, ಶೇ 5.55 ರಷ್ಟಿದೆ. ಹಾಗೇ ಕಳೆದ 24 ಗಂಟೆಯಲ್ಲಿ ಚೇತರಿಸಿಕೊಂಡುವರು 2,99,073, ಚೇತರಿಕೆ ಪ್ರಮಾಣ 93.23ರಷ್ಟಿದೆ. ಕಳೆದ 24 ಗಂಟೆಯಲ್ಲಿ 665 ಜನ ಕೊರೊನಾಕ್ಕೆ ಸಾವನ್ನಪ್ಪಿದ್ದಾರೆ ಎಂದು ಸಚಿವಾಲ ತಿಳಿಸಿದೆ.
17,69,745 ಜನರಿಗೆ ಕಳೆದ 24 ಗಂಟೆಯಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಲಸಿಕಾ ಅಭಿಯಾನ ಪ್ರಾರಂಭದಿಂದ ಇಲ್ಲಿಯವರೆಗು 163.58 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.