KPTCL (ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಶನ್ ಲಿಮಿಟೆಡ್) ಮತ್ತು ರಾಜ್ಯದ ವಿವಿಧ ವಿದ್ಯುತ್ ನಿಗಮಗಳು ಹಾಗೂ ಕಂಪನಿಗಳು, ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಸೆಪ್ಟೆಂಬರ್‌ನಲ್ಲಿ ಈ ಕುರಿತ ಅಧಿಸೂಚನೆ ಪ್ರಕಟವಾಗಿದ್ದು, ಅಕ್ಟೋಬರ್‌ನಿಂದ ಆನ್‌ಲೈನ್ ಅರ್ಜಿಗಳ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದೆ.
ಈ ಅಧಿಸೂಚನೆಯಡಿಯಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್-2 ಹುದ್ದೆಗಳು ಸೇರಿ ಒಟ್ಟು 2975 ಹುದ್ದೆಗಳು ಲಭ್ಯವಿವೆ. ಇದು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಕೇವಲ SSLC ವಿದ್ಯಾರ್ಹತೆ ಇದ್ದರೆ ಸಾಕು.
ಹುದ್ದೆಗಳ ವಿವರ
ಪೋಸ್ಟ್‌ಗಳ ಹೆಸರು: ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್-2
ಒಟ್ಟು ಹುದ್ದೆಗಳು: 2975
ವೇತನ ಶ್ರೇಣಿ: ₹28,550 – ₹63,000
ವಿದ್ಯಾರ್ಹತೆ: SSLC (10ನೇ ತರಗತಿ)
ಅರ್ಜಿಯ ಪ್ರಕ್ರಿಯೆ: ಆನ್‌ಲೈನ್
ಅರ್ಜಿಯ ಪ್ರಕ್ರಿಯೆ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳವಾಗಿದ್ದು, ಅಭ್ಯರ್ಥಿಗಳು KPTCL ಅಥವಾ ಸಂಬಂಧಪಟ್ಟ ವಿದ್ಯುತ್ ನಿಗಮಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಆನ್‌ಲೈನ್ ಫಾರ್ಮ್ ಅನ್ನು ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
ಅಂತಿಮ ದಿನಾಂಕದ ಮೊದಲು ಅರ್ಜಿಯನ್ನು ಪರಿಶೀಲಿಸಿ ಸಲ್ಲಿಸುವುದು ಮುಖ್ಯವಾಗಿದೆ.
ಅಧಿಸೂಚನೆ ಬಿಡುಗಡೆ ದಿನಾಂಕ: ಸೆಪ್ಟೆಂಬರ್
ಅರ್ಜಿಯ ಪ್ರಾರಂಭ ದಿನಾಂಕ: ಅಕ್ಟೋಬರ್
ಅರ್ಜಿಯ ಕೊನೆ ದಿನಾಂಕ: (ಇಂದಿನಿಂದ) 4 ದಿನಗಳು ಬಾಕಿ