ಬೆಂಗಳೂರು: ಹಳ್ಳಿಫೈಟ್ ಎಂದೇ ಪ್ರಸಿದ್ಧವಾಗಿರುವ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಆರಂಭವಾಗಿದ್ದು, ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.
ಇಂದು ಬೆಳಿಗ್ಗೆ 7 ಗಂಟೆಯಿಂದಲೇ 2ನೇ ಹಂತದ ಚುನಾವಣೆಗೆ ಮತದಾನ ಬಿರುಸು ಪಡೆದಿದೆ. ಡಿಸೆಂಬರ್ 30ರಂದು ಎರಡೂ ಹಂತದಲ್ಲಿ ನಡೆದ ಮತಗಳ ಎಣಿಕೆ ನಡೆಯಲಿದೆ.
ಮೊದಲ ಹಂತದಲ್ಲಿ ಡಿ.22ರಂದು ನಡೆದ 117 ತಾಲೂಕುಗಳಲ್ಲಿ 3019 ಗ್ರಾಮ ಪಂಚಾಯಿತಿಗಳಿಗೆ ಮತದಾನವಾಗಿತ್ತು. ಇಂದು 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳಿಗೆ ಬಿರುಸಿನ ಮತದಾನ ನಡೆದಿದೆ.
ಮೊದಲ ಹಂತದಲ್ಲಿ 1.57 ಲಕ್ಷ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇಂದು ನಡೆಯುತ್ತಿರುವ ಚುನಾವನೆಯಲ್ಲಿ 1.39 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದು, ಅದೃಷ್ಟ ಒರೆಗೆ ಹಚ್ಚಿದ್ದಾರೆ.
ಈ ಚುನಾವಣೆ ರಾಜಕೀಯ ಪಕ್ಷಗಳ ಚಿನ್ಹೆಯಡಿ ನಡೆಯುತ್ತಿಲ್ಲವಾದರೂ, ಗ್ರಾಮ ಹಾಗೂ ಬ್ಲಾಕ್ ಮಟ್ಟದ ಶಾಸಕರು, ಸಂಸದರ ಬೆಂಬಲಿಗರೇ ಹೆಚ್ಚಾಗಿ ಕಣದಲ್ಲಿರುವುದು ವಿಶೇಷ.
ಬೀದರ್ ಜಿಲ್ಲೆಯೊಂದರಲ್ಲಿ ಮಾತ್ರ ಎಲೆಕ್ಟ್ರಾನಿಕ್ ಮತ ಯಂತ್ರ ಬಳಕೆ ಮಾಡಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಬ್ಯಾಲೆಟ್ ಪತ್ರಗಳಲ್ಲಿ ಮತದಾನ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯ ಅರ್ಧದಷ್ಟು ತಾಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ನಡೆದಿದ್ದು, ಇಂದು ಉಳಿದ ತಾಲೂಕುಗಳಲ್ಲಿ ಮತದಾನ ನಡೆದಿದೆ.
ಅಸೆಂಬ್ಲಿ, ಲೋಕಸಭೆ ಚುನಾವಣೆಯಷ್ಟೇ ಈ ಹಳ್ಳಿಫೈಟ್ನಲ್ಲೂ ಕೂಡ ಅಭ್ಯರ್ಥಿಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತದೆ. 1999-2000ರ ನಂತರ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಪ್ರತಿವರ್ಷ ರಸ್ತೆ, ಕುಡಿಯುವ ನೀರು, ಒಳಚರಂಡಿ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ರೂಪದಲ್ಲಿ ಕೋಟಿಗಟ್ಟಲೆ ಅನುದಾನ ಬರುತ್ತಿದೆ. ಹೀಗಾಗಿ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಭಾರಿ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಈ ಕಾರಣಕ್ಕಾಗಿಯೇ 100ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಗ್ರಾಮಸ್ಥರೇ ಮುಂದೆ ನಿಂತು ಲಕ್ಷ ಲಕ್ಷಕ್ಕೆ ಹರಾಜು ಹಾಕಿ ಅವಿರೋಧ ಆಯ್ಕೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಗ್ರಾಮ ಪಂಚಾಯಿತಿಗಳಿಗೆ ಹರಿದು ಬರುತ್ತಿರುವ ಅನುದಾನ ಎಂದರೆ ತಪ್ಪಾಗಲಾರದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel