ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ೨ನೇ ಮಹತ್ವದ ಸಭೆ..!
ಅಯೋಧ್ಯೆಯ ಸರ್ಕ್ಯೂಟ್ ಹೌಸ್ ನಲ್ಲಿ ರಾಮಜನ್ಮಭೂಮಿ ನಿರ್ಮಾಣದ ವಿಚಾರವಾಗಿ ಇಂದು ೨ನೇ ಸಭೆಯನ್ನು ನಡೆಸಲಾಗಿದೆ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಸಭೆಯಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಮಹಾರಾಜ್, ಸ್ವಾಮಿ ಗೋವಿಂದ್ ನಾಥ್ ಗಿರಿಜಿ ಮಹಾರಾಜ್, ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರು ಸೇರಿದಂತೆ ಹಲವು ಸದಸ್ಯರು ಭಾಗಿಯಾಗಿದ್ದರು.
ಇನ್ನೂ ಹಲವಾರು ಸದಸ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಹಾಜರಿದ್ರು. ಅಲ್ದೇ ಸಭೆಯಲ್ಲಿ ದೇವಾಲಯ ನಿರ್ಮಾಣದ ದಿನಾಂಕವನ್ನು ಅಂತಿಮಗೊಳಿಸುª ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.ಸಭೆಯಲ್ಲಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಕೆ ಅವಸ್ಥಿ ಉಪಸ್ಥಿತರಿದ್ದರು. 2019 ರ ನವೆಂಬರ್ 09 ರಂದು ಭಾರತದ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಕೇಂದ್ರ ಸರ್ಕಾರವು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿತು.








