2ನೇ ಟೆಸ್ಟ್ – ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ
ಚೆನ್ನೈ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆಯಾಗಿದೆ. ವಾಷಿಂಗ್ಟನ್ ಸುಂದರ್ ಬದಲು ಕುಲದೀಪ್ ಯಾದವ್ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ ಜಸ್ಪ್ರಿತ್ ಬೂಮ್ರಾ ಬದಲು ಮಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ. ಹಾಗೇ ಶಹಬಾಝ್ ನದೀಮ್ ಬದಲು ಅಕ್ಸರ್ ಪಟೇಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ಇಂಗ್ಲೆಂಡ್ ತಂಡದಲ್ಲೂ ಕೆಲವೊಂದು ಬದಲಾವಣೆಯಾಗಿದೆ. ವಿಕೆಟ್ ಕೀಪರ್ ಜೋಸ್ ಬಟ್ಲರ್ ಬದಲು ಬೆನ್ ಫೋಕ್ಸ್ ಸ್ಥಾನ ಪಡೆದುಕೊಂಡ್ರೆ, ಗಾಯದಿಂದ ಬಳಲುತ್ತಿರುವ ಜೋಫ್ರಾ ಆರ್ಚೆರ್, ವೇಗಿ ಜೇಮ್ಸ್ ಆಂಡರ್ಸನ್, ಬೆಸ್ ಬದಲು ಸ್ಟುವರ್ಟ್ ಬ್ರಾಡ್, ಮೋಯಿನ್ ಆಲಿ ಮತ್ತು ಒಲಿ ಸ್ಟೋನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ –
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ((ನಾಯಕ),) ಅಜಿಂಕ್ಯಾ ರಹಾನೆ, ರಿಷಬ್ ಪಂತ್, ಅಕ್ಸರ್ ಪಟೇಲ್, ಆರ್. ಅಶ್ವಿನ್, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮಹಮ್ಮದ್ ಸಿರಾಜ್.
ಇಂಗ್ಲೆಂಡ್ ತಂಡ
ರೋರಿ ಬನ್ರ್ಸ್, ಡಾಮಿನಿಕ್ ಸಿಬ್ಲೆ, ಡೇನಿಯಲ್ ಲಾರೆನ್ಸ್, ಜಾಯ್ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಒಲಿ ಪೊಪ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಮೋಯಿನ್ ಆಲಿ, ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್, ಒಲಿ ಸ್ಟೋನ್.