ಭಾರತದ ಗಡಿಗಳನ್ನು ರಕ್ಷಿಸಲು 3 ಪಡೆಗಳು ಸನ್ನದ್ಧ : ಬಿಪಿನ್ ರಾವತ್
ಕೋಲ್ಕತಾ : ದೇಶದ ಭೂ, ಜಲ, ಆಕಾಶದ ಗಡಿಗಳನ್ನು ರಕ್ಷಿಸಲು ನಮ್ಮ ಸಶಸ್ತ್ರ ಪಡೆಗಳು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿವೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್ ಬಿಲ್ಡರ್ ಅಂಡ್ ಇಂಜಿನಿಯರ್ಸ್ ನಿರ್ಮಿಸುತ್ತಿರುವ ಫ್ರಿಗೇಟ್ ಯುದ್ಧನೌಕೆ-17ನ ನೂತನ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾವತ್ ಅವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ಚೀನಾ ಎರಡೂ ರಾಷ್ಟ್ರಗಳ ಸಮನ್ವತೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಇದನ್ನು ತಡೆಯಲು ಭಾರತದ ಪಡೆಗಳು ಸಿದ್ಧವಾಗಿವೆ.
ಕೊರೊನಾ ಸಂಕಷ್ಟದಲ್ಲೂ ನಮ್ಮ ಭೂಸೇನೆ, ವಾಯುಸೇನೆ, ನೌಕಾಸೇನೆಗಳು ಉನ್ನತ ಮಟ್ಟದ ತಯಾರಿ ನಡೆಸಿವೆ ಎಂದು ಬಿಪಿನ್ ರಾವತ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ನೀತಿಗಳ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉತ್ತೇಜಿಸುತ್ತಿದೆ.
ಆತ್ಮನಿರ್ಭರ ಭಾರತ್ ಕೂಡಾ ಕೇಂದ್ರ ಸರ್ಕಾರದ ದೂರದೃಷ್ಟಿಯಾಗಿದೆ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel