ಗುಂಡಿಗೆ ಬೈಕ್ ಬಿದ್ದು ಮೂವರು ಆಂಧ್ರದಲ್ಲಿ ಕನ್ನಡಿಗರ ಸಾವು
ಆಂಧ್ರಪ್ರದೇಶ: ವೇಗವಾಗಿ ಬಂದ ಬೈಕ್ ಒಂದು ಆಯತಪ್ಪಿ ಗುಂಡಿಯಲ್ಲಿ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಹಾಲಹರವಿ ತಾಲೂಕಿನ ಚಿಂತಕುಂಟಾದಲ್ಲಿ ನಡೆದಿದೆ.
ಬೋಯ ಗದಿ, ಬೋಯ ಚಂದ್ರಶೇಖರ್ ಮತ್ತು ಕಾಡಸಿದ್ದ ಮೃತರು ಎಂದು ಗುರುತಿಸಲಾಗಿದೆ. ಇವರು ಕರ್ನಾಟಕದವಾರಾಗಿದ್ದು,ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ತಾಲೂಕಿನ ಟೆಕ್ಕಲಕೋಟ ಗ್ರಾಮದ ನಿವಾಸಿಗಳಾಗಿದ್ದಾರೆ.
ನಡೆದಿದ್ದೇನು?: ರಸ್ತೆಯ ಸೇತುವೆ ನಿರ್ಮಾಣ ನಡೆಯುತ್ತಿದ್ದು, ಸೇತುವೆಯ ಬಳಿ ಯಾವ ಸೂಚಕ ಫಲಕಗಳು ಅಳವಡಿಸಿರಲ್ಲ. ಹೀಗಾಗಿ ಅತಿವೇಗದಿಂದ ಬಂದ ಬೈಕ್ ಗುಂಡಿಯಲ್ಲಿ ಬಿದ್ದು ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.