ನವದೆಹಲಿ: ಕೊರೊನಾದಿಂದಾಗಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಜನರು ಮನೆಯಲ್ಲೇ ಇದ್ದು, ಬ್ಯಾಂಕ್ ಸಾಲದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹೇಗಪ್ಪಾ ಬ್ಯಾಂಕ್ ಇಎಂಐ ಕಟ್ಟೋದು ಎಂದು ತಲೆ ಮೇಲೆ ಕೈ ಹಾಕಿ ಕುಳಿತುಕೊಂಡಿದ್ದರು. ಇದೀಗ ಬ್ಯಾಂಕ್ ಸಾಲಗಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಗ್ ರಿಲೀಫ್ ನೀಡಿದೆ. ಮುಂದಿನ ಮೂರು ತಿಂಗಳು ಇಎಂಐ ಕಟ್ಟುವುದಕ್ಕೆ ವಿನಾಯಿತಿ ನೀಡಲಾಗಿದೆ. ಮಾರ್ಚ್ 1 ರಿಂದ ಅನ್ವಯವಾಗುವಂತೆ ವಿನಾಯಿತಿ ಅನ್ವಯವಾಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಘೋಷಣೆ ಮಾಡಿದ್ದಾರೆ.
ಇಎಂಐ ವಿನಾಯಿತಿ ಎಲ್ಲ ಬ್ಯಾಂಕುಗಳಿಗೆ ಅನ್ವಯವಾಗಲಿದೆ. ಕೃಷಿ, ವಾಹನ, ಗೃಹಸಾಲದ ಇಎಂಐಗೆ ಮೂರು ತಿಂಗಳು ವಿನಾಯಿತಿ ನೀಡಲಾಗುತ್ತದೆ. ಬಂಗಾರದ ಮೇಲೆ ಬ್ಯಾಂಕುಗಳಿಂದ ಪಡೆದಿರುವ ಸಾಲಕ್ಕೂ ಈ ನಿಯಮ ಅನ್ವಯವಾಗಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಇನ್ನು ಗೋಲ್ಡ್ಲೋನ್, ಯಾವುದೇ ಹಣಕಾಸು ಸಂಸ್ಥೆಗಳಿಂದ ಪಡೆದ ಯಾವುದೇ ಸಾಲಗಳ ಮರುಪಾವತಿ ಕಂತುಗಳನ್ನು ಜೂನ್ ತಿಂಗಳವರೆಗೆ ಮುಂದೂಡಲಾಗಿದೆ. ಇದರಿಂದ ಕೊರೊನಾವೈರಸ್ ಲಾಕ್‌ಡೌನ್‌ನಿಂದ ಸಾಲದ ಇಎಂಐ ಹೇಗಪ್ಪಾ ಕಟ್ಟೋದು ಎಂದು ಕಂಗಾಲಾಗಿದ್ದವರು ನಿಟ್ಟುಸಿರು ಬಿಡುವಂತಾಗಿದೆ.