ಸಿಎಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿಗಳನ್ನು ದಿಢೀರ್ ಕೆಲಸದಿಂದ ತೆಗೆದುಹಾಕಲಾಗಿದೆ. ಈ ಬೆಳವಣಿಗೆ ನಿನ್ನೆ ನಡೆದಿದ್ದು, (ಏಪ್ರಿಲ್ 1) ಮಧ್ಯಾಹ್ನದಿಂದಲೇ ಜಾರಿಗೆ ಬರುವಂತೆ ಆದೇಶಿಸಲಾಗಿದೆ.
ಸರ್ಕಾರದ ಆದೇಶದಲ್ಲಿ ಏನಿದೆ..?
ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ, ಟಿಪ್ಪಣಿಯಲ್ಲಿನ 30 ಸಿಬ್ಬಂದಿಗಳ ಸೇವೆಯು ಅವಶ್ಯಕತೆಯಿಲ್ಲದ ಕಾರಣ ದಿನಾಂಕ:01.04.2025ರ ಅಪರಾಹ್ನದಿಂದ ಜಾರಿಗೆ ಬರುವಂತೆ ಗುತ್ತಿಗೆ ಆಧಾರದ ನೇಮಕಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸುವಂತೆ ಟಿಪ್ಪಣಿಯಲ್ಲಿ ಕೋರಲಾಗಿರುತ್ತದೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು, ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು 01.04.2025 ಅಪರಾಹ್ನದಿಂದ ಜಾರಿಗೆ ಬರುವಂತೆ ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯದ ಕರ್ತವ್ಯದಿಂದ ಕಾರ್ಯವಿಮುಕ್ತಿಗೊಳಿಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಕಾರ್ಯಮುಕ್ತಗೊಂಡ ಹುದ್ದೆಗಳು:
ಸಹಾಯಕರು
ಕಿರಿಯ ಸಹಾಯಕರು
ದಲಾಯತ್ ಹುದ್ದೆ
ಕಾರಣ
ಈ ಉಚ್ಚಾಟನೆಯ ಹಿಂದೆ “ಈ ಸಿಬ್ಬಂದಿಯ ಅವಶ್ಯಕತೆ ಇಲ್ಲ” ಎಂಬ ಕಾರಣವನ್ನು ನೀಡಲಾಗಿದೆ.
ಈ ಬಗ್ಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.
ಈ ಆದೇಶವು ಏಪ್ರಿಲ್ 1 ರಿಂದಲೇ ಜಾರಿಯಲ್ಲಿದೆ.