ಈ ಭೂಪನಿಗೆ 6 ಜನ ಹೆಂಡತಿಯರು – ಆತನ ಯಾವ ಹೆಂಡತಿಯರಿಗೂ ತಿಳಿದಿಲ್ಲ..
ಹೆಂಡತಿಗೆ ಗೊತ್ತಿಲ್ಲದಂತೆ ವ್ಯಕ್ತಿಯೊಬ್ಬ 2 ಅಥವಾ ಮೂರು ಮದುವೆಗಳು ಆದ ಬಗ್ಗೆ ಕೇಳಿರುತ್ತೀರ ಇಲ್ಲವೆ ಸಿನಿಮಾದಲ್ಲಿ ನೋಡಿರುತ್ತಿರ. ಆದರೆ ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಬರೊಬ್ಬರಿ 6 ಮಹಿಳೆಯನ್ನ ಮದುವೆಯಾಗಿದ್ದಾನೆ. ಅಚ್ಚರಿ ಅಂದರೆ ಈ ವ್ಯಕ್ತಿ ಈ ರೀತಿ ಮದುವೆಯಾಗಿರುವುದು ಆತನ ಯಾವ ಹೆಂಡತಿಯರಿಗೂ ಗೊತ್ತಿಲ್ಲ.
33 ವರ್ಷದ ಅಡಪ ಶಿವಶಂಕರ ಬಾಬು ಎಂಬ ವ್ಯಕ್ತಿಯನ್ನ ಹೈದ್ರಾಬಾದದ ಪೊಲೀಸರು ಬಂಧಿಸಿದ್ದಾರೆ, ಆತನ ವಿರುದ್ಧ ವಿರುದ್ಧ ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ಹಿಂದಿನ ಮದುವೆಗಳನ್ನು ಮುಚ್ಚಿಟ್ಟು ಮದುವೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಗಚ್ಚಿಬೌಲಿ ಪೊಲೀಸ್ ಇನ್ಸ್ಪೆಕ್ಟರ್ ಜಿ ಸುರೇಶ್ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶದಾದ್ಯಂತ ಈತನ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ.
ಆಂಧ್ರಪ್ರದೇಶದ ಮಂಗಳಗಿರಿ ಮೂಲದ ಬಾಬು, ಮ್ಯಾಟ್ರಿಮೋನಿಯಲ್ ಸೈಟ್ಗಳಲ್ಲಿ ವಿಚ್ಛೇದಿತ ಮಹಿಳೆಯರನ್ನ ಗುರಿಯಾಗಿಸಿ ಮೋಸ ಮಾಡಿದ್ದಾನೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಭಾರೀ ಸಂಬಳದ ಪ್ಯಾಕೇಜ ಬರುತ್ತಿದೆ ಎಂದು ಹೇಳಿ ಮಹಿಳೆಯರನ್ನು ಮದುವೆಯಾಗಿ, ಕೆಲವೇ ದಿನಗಳಲ್ಲಿ ನಗದು ಮತ್ತು ಚಿನ್ನದೊಂದಿಗೆ ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೊಂಡಾಪುರದ ಮಹಿಳೆಯೊಬ್ಬರು ಕಳೆದ ವಾರ ಪೊಲೀಸರನ್ನ ಸಂಪರ್ಕಿಸಿದ್ದು, 2021 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಪರಿಚಯವಾದ ವ್ಯಕ್ತಿ ವಿವಾಹವಾಗಿ 20 ಲಕ್ಷ ರೂಪಾಯಿ ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ಈ ಮೂಲಕ ಈತನ ಹಳೆಯ ಪ್ರಕರಣಗಳು ಬೆಳಕಿಗೆ ಬಂಧಿವೆ.
ಆರೋಪಿಯನ್ನು ವಿಶಾಖಪಟ್ಟಣದಿಂದ ಬಂಧಿಸಿ ಹೈದರಾಬಾದ್ಗೆ ಕರೆತರಲಾಗಿದೆ. ಇನ್ನೂ ಹೆಚ್ಚಿನವರು ಈತನ ಮೋಸಕ್ಕೆ ಬಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.