ಸದ್ದಿಲ್ಲದೆ ಹೆಚ್ಚಾಗ್ತಿದೆ ಕರಿಮಾರಿಯ ಅಬ್ಬರ : ಜಿಲ್ಲಾವಾರು ಕೇಸ್ ಗಳ ಲೀಸ್ಟ್ ಇಲ್ಲಿದೆ
ಬೆಂಗಳೂರು: ರಾಜ್ಯದಲ್ಲಿ ಸದ್ದಿಲ್ಲದೇ ಕರಿ ಮಾರಿ ಬ್ಲಾಕ್ ಫಂಗಸ್ ಅಬ್ಬರ ಹೆಚ್ಚಾಗುತ್ತಿದೆ.
ಕರಿ ಮಾರಿ ದಿನದಿಂದ ದಿನಕ್ಕೆ ರಾಜ್ಯದಲ್ಲಿ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದ್ದು, ನಿತ್ಯ ಎರಡಂಕಿ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಕಾಡ್ತಿದೆ.
ಸದ್ಯ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಪ್ಪು ಶಿಲೀಂಧ್ರ ಪತ್ತೆಯಾಗಿದ್ದು, ಈವರೆಗೂ 303 ಸೋಂಕಿತರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ರಾಜ್ಯದಲ್ಲಿ ಈವರೆಗೂ 3,491 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಾವಿರ ಗಡಿ ದಾಟಿದ್ದು, 1,109 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, 104 ಜನರು ಮೃತಪಟ್ಟಿದ್ದಾರೆ.
ಅತೀ ಕಡಿಮೆ ಕೇಸ್ ಗಳು ಕೊಡಗು ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಜಿಲ್ಲಾವಾರು ಕೇಸ್ ಸಂಖ್ಯೆ ಇಲ್ಲಿದೆ
ಬೆಂಗಳೂರು : 1,109
ಬಾಗಲಕೋಟೆ : 126
ಬಳ್ಳಾರಿ : 138
ಬೆಳಗಾವಿ : 159
ಚಿತ್ರದುರ್ಗ : 143
ದಾವಣಗೆರೆ : 117
ಧಾರವಾಡ : 279
ಕಲರ್ಬುಗಿ : 196
ಮೈಸೂರು : 128
ರಾಯಚೂರು : 125
ವಿಜಯಪುರ : 208
ಕೋಲಾರ : 107
ದಕ್ಷಿಣ ಕನ್ನಡ : 95
ಬೆಂ. ಗ್ರಾಮಾಂತರ : 65
ಗದಗ : 73
ಹಾವೇರಿ : 65
ಶಿವಮೊಗ್ಗ : 56
ತುಮಕೂರು : 46
ಕೊಪ್ಪಳ : 47
ಹಾಸನ : 45
ಬೀದರ್ : 33
ಉಡುಪಿ : 30
ಮಂಡ್ಯ : 23
ಚಿಕ್ಕಬಳ್ಳಾಪುರ : 24
ಚಾಮರಾಜನಗರ : 12
ಚಿಕ್ಕಮಗಳೂರು : 6
ಯಾದಗಿರಿ : 3
ಉತ್ತರಕನ್ನಡ : 8
ರಾಮನಗರ : 9
ಕೊಡುಗು : 1









