ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ನಿಂದ 3614 ಅಪ್ರೆಂಟಿಸ್ ನೇಮಕಾತಿ ಅಹ್ವಾನ
ಒಟ್ಟು 3614 ಅಪ್ರೆಂಟಿಸ್ ಹುದ್ದೆಗಳಿಗೆ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುಲು ಮುಂದಾಗುತ್ತಿದೆ. ಏಪ್ರಿಲ್ 27 ರಿಂದ ಅರ್ಜಿ ತುಂಬಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಅರ್ಜಿ ನಮೂನೆಯನ್ನು ಸಲ್ಲಿಸಲು ಮೇ 15 ಕೊನೆಯ ದಿನವಾಗಿದ್ದು, ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಮೇ 23 ರಂದು ಫಲಿತಾಂಶಗಳು ಬಿಡುಗಡೆಯಾಗಲಿದೆ.
“ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಮೆರಿಟ್ ಆಧಾರದ ಮೇಲೆ ಅಪ್ರೆಂಟಿಸ್‌ಗಳನ್ನ ಆಯ್ಕೆ ಮಾಡಲಾಗುತ್ತದೆ.
ವಿವರಗಳನ್ನು ಇಲ್ಲಿ ಪರಿಶೀಲಿಸಿ:
ವಯೋಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳು. ಆದರೆ ಅಭ್ಯರ್ಥಿ/ಅರ್ಜಿದಾರರ ಜನ್ಮ ದಿನಾಂಕವು 15.05.1998 ಮತ್ತು 15.05.2004 ರ ನಡುವೆ ಇರಬೇಕು.
ಅಪ್ರೆಂಟಿಸ್‌ಗಳು ತಮ್ಮ ಕಾರ್ಯದ ಅವಧಿಯಲ್ಲಿ ಈ ಕೆಳಗಿನಂತೆ ಅಪ್ರೆಂಟಿಸ್ ಕಾಯಿದೆಯ ಪ್ರಕಾರ ಮಾಸಿಕ ಸ್ಟೈಫಂಡ್‌ಗೆ ಅರ್ಹರಾಗಿರುತ್ತಾರೆ:
ಪದವೀಧರ ಅಪ್ರೆಂಟಿಸ್: 9,000/- ರೂ
ಟ್ರೇಡ್ ಅಪ್ರೆಂಟಿಸ್‌ಗಳು (1 ವರ್ಷ): 7,700/- ರೂ
ಡಿಪ್ಲೊಮಾ ಅಪ್ರೆಂಟಿಸ್‌ಗಳು: 8,000/- ರೂ
ಮೇಲಿನ ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ONGC ವೆಬ್‌ಸೈಟ್ www.ongcapprentices.ongc.co.in ಗೆ ಭೇಟಿ ನೀಡಬೇಕು. 27.04.2022 ರಿಂದ 15.05.2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.








