ರಾಜ್ಯದಲ್ಲಿ ಹೆಚ್ಚುತ್ತಿದೆ `ಕರಿಮಾರಿ’ಯ ಅಬ್ಬರ black-fungus saaksha tv
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರಿಮಾರಿ ಬ್ಲಾಕ್ ಫಂಗಸ್ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ಪ್ರತಿದಿನ ರಾಜ್ಯದಲ್ಲಿ ಐದರಿಂದ ಹದಿನೈದು ಕೇಸ್ ಗಳು ಪತ್ತೆಯಾಗುತ್ತಿದ್ದು, ಆತಂಕ ಹೆಚ್ಚಿಸುತ್ತಿದೆ.
ಸದ್ಯ ರಾಜ್ಯದಲ್ಲಿ ಒಟ್ಟು 3,845 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿದೆ. ಬ್ಲ್ಯಾಕ್ ಫಂಗಸ್ ಗೆ ರಾಜ್ಯಾದ್ಯಂತ 441 ಜನ ಬಲಿಯಾಗಿದ್ದಾರೆ.
ಅದರಲ್ಲೂ ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ಹಾವಳಿ ಹೆಚ್ಚಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಕೇಸ್ ಗಳು ಪತ್ತೆಯಾಗಿವೆ.
ನಗರದಲ್ಲಿ ಈವರೆಗೂ 1,212 ಬ್ಲ್ಯಾಕ್ ಫಂಗಸ್ ಕೇಸ್ ದಾಖಲಾಗಿವೆ. ಜೊತೆಗೆ 149 ಜನ ಸಾವನ್ನಪ್ಪಿದ್ದಾರೆ.
ನಗರದ ವಿಕ್ಟೋರಿಯಾದಲ್ಲಿ 209 ಕೇಸ್, ಬೌರಿಂಗ್ ಆಸ್ಪತ್ರೆ 439 ಕೇಸ್, ಕೆಸಿ ಜನರಲ್ ಆಸ್ಪತ್ರೆ 7 ಕೇಸ್, ಇಂದಿರಾಗಾಂಧಿ ಆಸ್ಪತ್ರೆಯಲ್ಲಿ 3 ಕೇಸ್ ಪತ್ತೆಯಾಗಿದೆ. ಇದು ಮೆಟ್ರೊ ಮಂದಿಯ ಎದೆಬಡಿತ ಹೆಚ್ಚಿಸಿದೆ.









