ನಿರಾಣಿ ಕುಟುಂಬದಿಂದ ಮೂರನೇ ವ್ಯಕ್ತಿ ರಾಜಕೀಯಕ್ಕೆ ಬರಲ್ಲ – ಮುರುಗೇಶ್ ನಿರಾಣಿ
ಕುಟುಂಬ ರಾಜಕಾರಣದ ಭಾಜಪದಲ್ಲಿ ಅವಕಾಶವಿಲ್ಲ ಎಂಬ ಮೋದಿ ಹೇಳಿಕೆ ವಿಚಾರದ ಕುರಿತು ಸಚಿವ ಮುರುಗೇಶ್ ನಿರಾಣಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿರಾಣಿ ಕುಟುಂಬದಿಂದ ಮೂರನೇ ವ್ಯಕ್ತಿ ಸ್ಪರ್ಧಿಸಿದ್ರೆ, ಆವತ್ತೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರ್ತಿನಿ ಎಂದು ಹೇಳಿದ್ದಾರೆ.
ನಿರಾಣಿ ಕುಟುಂಬದ ಮೂರನೇಯರು ರಾಜಕೀಯಕ್ಕೆ ಬರುತ್ತಿಲ್ಲ. ಇದು ನೂರಕ್ಕೆ ನೂರರಷ್ಟು ಸತ್ಯ. ಮೂರನೇ ವ್ಯಕ್ತಿ ಸ್ಪರ್ಧೆ ಅದು ಮಾಧ್ಯಮಗಳ ಸೃಷ್ಟಿ. ಸಂಗಮೇಶ್ ನಿರಾಣಿ ಕಳೆದ ನಾಲ್ಕು ವರ್ಷದಿಂದ ಜಮಖಂಡಿಯಲ್ಲಿ ಸಭೆ ಸಮಾರಂಭ ಮಾಡಿಲ್ಲ. ನನಗೂ ಈ ರೀತಿಯ ಅಪವಾದ ಬರಬಾರದು ಅಂತಾ ಜಮಖಂಡಿ ಮಾಜಿ ಶಾಸಕರ ಅನುಮತಿ ಪಡೆದು ಹೋಗುತ್ತಿರುವೆ ಎಂದು ಹೇಳಿದರು.
ನಾನು ನನ್ನ ಸಹೋದರ ಹನುಮಂತ ನಿರಾಣಿ ಹೊರತು ಪಡಿಸಿ ನಮ್ಮ ಮನೆಯಲ್ಲಿ ಯಾರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಯಾರಾದರೂ ನನ್ನ ಮಾತುಕೇಳದೇ ನಮ್ಮ ಕುಟುಂಬದವರು ರಾಜಕೀಯ ಬಂದ್ರೆ . ಅವತ್ತೇ ನಾನು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರ್ತಿನಿ ಎಂದು ಹೇಳಿದರು.
ಪ್ರಧಾನಮಂತ್ರಿಗಳು ಹೇಳಿದ್ದನ್ನ ನಾನು ಪಾಲಿಸುತ್ತೇನೆ. ಮೊದಲಿನಿಂದಲೂ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದಾರೆ ನಾವು ಮುಂದುವರೆಯುತ್ತೇವೆ. ನೂರಕ್ಕೆ ನೂರರಷ್ಟು ಮೂರನೆಯವರು ರಾಜಕೀಯ ಕ್ಕೆ ಬರುವುದಿಲ್ಲ. ಇದರಲ್ಲಿ ಯಾವುದೇ ಸಂಶಯವೇ ಬೇಡ ಎಂದು ಸ್ಪಷ್ಟಪಡಿಸಿದರು.