ಮುಂಬೈ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 4 ನವಜಾತಶಿಶುಗಳ ಸಾವು..
ಮುಂಬೈ : ಮುಂಬೈ ನ ಭಾಂಡೂಪ್ ನಲ್ಲಿರುವ ಬೃಹನ್ ಮುಂಬೈ ಮುನ್ಸಿಪಲ್ ನೇತೃತ್ವದ ಸಾವಿತ್ರಿಬಾಯಿ ಫುಲೆ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ನವಜಾತ ಶಿಶುಗಳು ಮೃತಪಟ್ಟಿದ್ದು , ಆತಂಕದ ವಾತಾವರಣ ಸೃಷ್ಟಿಯಾಗಿದೆ..
ಕಳೆದ 4 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿದ ನವಜಾತಾ ಶಿಶುಗಳು ಸಾವನ್ನಪ್ಪುತ್ತಿವೆ.. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ BMC ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ತಿಳಿಸಿದೆ.
ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿದವು. ನಂತರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ಅಮಾನತು ಗೊಳಿಸಲಾಗುವುದು. ಈ ಕುರಿತು ಉನ್ನತ ಮಟ್ಟದ ತನಿಖೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದರು..
ಆಡಳಿತದ ನಿರ್ಲಕ್ಷ್ಯದಿಂದ ಶಿಶುಗಳು ಸಾವನ್ನಪ್ಪುತ್ತಿವೆ ಎಂದು ಹೇಳಲಾಗ್ತಿದೆ. ಆದರೆ ಸೋಂಕಿನಿಂದಾಗಿ ಶಿಶುಗಳ ಸಾವು ಸಂಭವಿಸಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ,..
4 ಶಿಶುಗಳ ಪೈಕಿ ಮೂರು ಶಿಶುಗಳು ಸೆಪ್ಟಿಕ್ ಶಾಕ್ ನಿಂದಾಗಿ ಮೃತಪಟ್ಟಿದ್ದು, . ಶುಗಳಿಗೆ ಸೋಂಕು ತಗುಲಿದ್ದು, ಔಷಧಿಗೆ ಗುಣಮುಖವಾಗಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ..