ಮೈಸೂರು : ಮೈಸೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಒಟ್ಟು 590 ಹಾಸಿಗೆಗಳು ಲಭ್ಯವಿದ್ದು, ಇನ್ನು ಒಂದು ವಾರದಲ್ಲಿ ಹೆಚ್ಚುವರಿಯಾಗಿ 428 ಹಾಸಿಗೆ ಅಳವಡಿಸಲಾಗುವುದು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Dr. K. Sudhakar) ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್ ( Dr. K. Sudhakar), “ವೈದ್ಯಕೀಯ ಕಾಲೇಜುಗಳಲ್ಲಿ 178, ಜಿಲ್ಲಾಸ್ಪತ್ರೆಗಳಲ್ಲಿ 250, ಟ್ರಾಮಾ ಸೆಂಟರ್ ಗಳಲ್ಲಿ 260, 6 ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆ ಸೇರಿ ಜಿಲ್ಲೆಯಲ್ಲಿ ಒಟ್ಟು 1,318 ಹಾಸಿಗೆಗಳು ಕೋವಿಡ್ ಗೆ ಲಭ್ಯವಾಗಲಿದೆ.
ಜೆಎಸ್ಎಸ್ ಸಂಸ್ಥೆಯಿಂದ 400 ಹಾಸಿಗೆ ದೊರೆಯಲಿದ್ದು, ಒಟ್ಟು 1,718 ಹಾಸಿಗೆ ಕೋವಿಡ್ ಚಿಕಿತ್ಸೆಗೆ ಸಿಗಲಿದೆ” ಎಂದು ತಿಳಿಸಿದರು.
“ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಖಾಸಗಿ ಆಸ್ಪತ್ರೆಗಳಿಂದ ಒಂದೂವರೆ ಸಾವಿರ ಹಾಸಿಗೆಗಳು ಕೋವಿಡ್ ಗೆ ಲಭ್ಯವಾಗಲಿದೆ.
ಇದೂ ಸೇರಿ ಒಟ್ಟು ಸುಮಾರು 3,500 ಹಾಸಿಗೆ ಕೋವಿಡ್ ಚಿಕಿತ್ಸೆಗೆ ಸಿಗಲಿದೆ” ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : ಮುನಿರತ್ನಗೆ ಬಿಗ್ ರಿಲೀಫ್ ಕೊಟ್ಟ `ಸುಪ್ರೀಂ ತೀರ್ಪು’
“ಈ ಬಾರಿ ನಾಡಹಬ್ಬ ದಸರಾ ಆಚರಣೆಯಾಗಲಿದೆ. ಜನರಿಗೂ ಹಬ್ಬಕ್ಕೆ ಬರುವ ಉತ್ಸಾಹ ಇದೆ. ಆದರೆ ಕೋವಿಡ್ ಯಾವಾಗ ಬೇಕಾದರೂ ಬರಬಹುದು.
ಆದ್ದರಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸರಳವಾಗಿ ಹಬ್ಬ ಆಚರಿಸುತ್ತಿದ್ದು, ಜನರು ಮನೆಯಲ್ಲೇ ಕುಳಿತು ಆಚರಣೆ ವೀಕ್ಷಿಸಬಹುದು.

300 ಕ್ಕಿಂತ ಹೆಚ್ಚು ಜನರು ಆಚರಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದಕ್ಕೆ ಜನರು ಸಹಕರಿಸಬೇಕು” ಎಂದು ಕೋರಿದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಮುನಿರತ್ನಗೆ ಬಿಗ್ ರಿಲೀಫ್ ಕೊಟ್ಟ `ಸುಪ್ರೀಂ ತೀರ್ಪು’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








