ದೆಹಲಿ : ರಿಲಯನ್ಸ್ ಜಿಯೋನಲ್ಲಿ 43,574 ಕೋಟಿ ಹೂಡಿಕೆ ಮಾಡುವದರ ಮೂಲಕ ಶೇಕಡಾ 9.99 ಪಾಲನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಹೊಸ ಇತಿಹಾಸ ಬರೆದಿದೆ . ವಿಶೇಷ ಅಂದ್ರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆಯಾದ ಮೊದಲ ಫಾರೆನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಇದಾಗಿದೆ.
ಇನ್ನು, ಈ ಬಗ್ಗೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಇಂದು ಬೆಳಗ್ಗೆ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಭಾರತ ಇಂದು ಪ್ರಮುಖ ಡಿಜಿಟಲ್ ರೂಪಾಂತರದ ಮಧ್ಯದಲ್ಲಿದೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲು ಫೇಸ್ ಬುಕ್ ಬದ್ಧವಾಗಿದೆ. ಇದಕ್ಕಾಗಿ ಮುಕೇಶ್ ಅಂಬಾನಿ ಒಡೆತನದ ಜಿಯೊ ಕಂಪೆನಿ ಜೊತೆ ಹಣಕಾಸು ಹೂಡಿಕೆ ಮಾಡುತ್ತಿದ್ದು, ಭಾರತದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಅವಕಾಶ ನೀಡಲು ಕೆಲವು ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಲಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು ಜಗತ್ತಿನ ಸುತ್ತ ಮನುಷ್ಯನ ಚಟುವಟಿಕೆಗಳು, ವಹಿವಾಟುಗಳು ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದು, ಇಂತಹ ಸಣ್ಣಪುಟ್ಟ ಉದ್ಯಮಶೀಲರು ತಮ್ಮ ಗ್ರಾಹಕರ ಜೊತೆ ವ್ಯವಹರಿಸಲು ಮತ್ತು ಉದ್ಯಮ ಬೆಳೆಸಲು ಇಂತಹ ಡಿಜಿಟಲ್ ಪಾವತಿ ವಿಧಾನ ಸಾಧನಗಳನ್ನು ಅವಲಂಬಿಸಿಕೊಂಡಿದ್ದಾರೆ. ಇದಕ್ಕಾಗಿ ಜಿಯೊ ಜೊತೆ ಸೇರಿ ಗ್ರಾಹಕರು ಮತ್ತು ಉದ್ಯಮಶೀಲರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿದ್ದೇವೆ ಎಂದು ಝುಕರ್ ಬರ್ಗ್ ತಿಳಿಸಿದ್ದಾರೆ.