ಇಂದು ಪ್ರತಿಷ್ಠಿತ ರಿಲಯನ್ಸ್ ಕಂಪನಿಯ 43 ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಕೆಲ ಮಹತ್ವದ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊAಡಿದ್ದಾರೆ. ಇಂಟರ್‌ನೆಟ್ ದೈತ್ಯ ಗೂಗಲ್ ರಿಲಯನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 33,737 ಕೋಟಿ ರೂಪಾಯಿ ಹಣವನ್ನ ಅಂದರೆ ಶೇ.7.7ರಷ್ಟು ಹಣವನ್ನು ಜಿಯೋದಲ್ಲಿ ಹೂಡಿಕೆಮಾಡಿರುವ ಬಗ್ಗೆ ಅಧಿಕೃತವಾಗಿ ಮುಖೇಶ್ ಅಂಬಾನಿ ಘೋಷಣೆ ಮಾಡಿದ್ದಾರೆ. 13 ಲಕ್ಷ ಕೋಟಿ ಮೌಲ್ಯದ ಮೊದಲ ಭಾರತೀಯ ಕಂಪನಿ ರಿಲಯನ್ಸ್ ಈ ವರ್ಷ ಭಾರೀ ದಾಖಲು ಮಾಡಿದೆ. ಮೋದಿಯ ಕನಸಾದ ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ಜಿಯೋ ಪಣ ತೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ. 
ಗೂಗಲ್ ಹಾಗೂ ಇತರೇ ಕಂಪನಿಗಳ ಹೊರತಾಗಿ ಇಂಟೆಲ್ ನೊಂದಿಗೂ ಸಹ ಜಿಯೋ ಒಪ್ಪಂದ ಮಾಡಿಕೊಂಡಿದೆ. ಇನ್ನೂ ಈಗಾಗಲೇ ದೇಶಾದ್ಯಂತ ಟ್ರೆಂಡಿAಗ್ ನಲ್ಲಿರುವ ಜಿಯೋ ನೆಟ್‌ವರ್ಕ್ನ ಮುಂದುವರೆದ ಭಾಗವಾಗಿ ಜಿಯೋ ೫ಜಿಯನ್ನು ಆತ್ಮ ನಿರ್ಭಾರ್ ನೆಟ್ ವರ್ಕ್ ಎಂದು ಘೋಷಿಸಿದ್ದಾರೆ. ಜಿಯೋಟಿವಿ+ ಜಿಯೋ ಗ್ಲಾಸ್ ಅನ್ನು ಅಭಿವೃದ್ಧಿ ಪಡಿಸುತ್ತಿರುವುದಾಗಿಯೂ ಮುಖೇಶ್ ಮಾಹಿತಿ ನೀಡಿದ್ದಾರೆ.








