ಕಲಬುರಗಿ : ತೊಗರಿ ನಾಡು ಕಲಬುರಗಿಯಲ್ಲಿ ಇಂದು 47 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಆ ಮೂಲಕ 352 ಕ್ಕೆ ಸೊಂಕಿತರ ಸಂಖ್ಯೆ ಏರಿಕೆಯಾಗಿರೋ ಮಾಹಿತಿಯನ್ನು ಜಿಲ್ಲಾಧಿಕಾರಿ ಶರತ್. ಬಿ .ಸಿಎಂ ಬಿಎಸ್ ಯಡಿಯೂರಪ್ಪನವರೊಂದಿಗೆ ಹಂಚಿಕೊಂಡಿದ್ದಾರೆ.
ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಪೇರೆನ್ಸ್ ನಡೆಸಿದ್ದಾರೆ. ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಶರತ್ ಬಿ, ಕಲಬುರಗಿಗೆ ಆಗಮಿಸಿದ ವಲಸೆ ಕಾರ್ಮಿಕರ ಮಾಹಿತಿ ನೀಡಿದ್ದಾರೆ. ಕಲಬುರಗಿಯಲ್ಲಿ ಇಂದು ಒಂದೆ ದಿನ 47 ಜನರಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಮುಂಬೈನಿಂದ ಬಂದಂತಹ ವಲಸೆ ಕಾರ್ಮಿಕರಲ್ಲಿ ಕರೊನಾ ಸೋಂಕು ಪತ್ತೆಯಾಗುತ್ತಿದೆ.
ಜೊತೆಗೆ ಐದು ಸಾವಿರಕ್ಕಿಂತ ಅಧಿಕ ಜನರ ವೈದ್ಯಕೀಯ ವರದಿ ಬಾಕಿ ಇರುವ ಬಗ್ಗೆಯು ಮಾಹಿತಿ ನೀಡಿದ್ದಾರೆ








