ಏಪ್ರಿಲ್ 28ರವರೆಗೆ ಭಾರತದಲ್ಲಿ 5.2 ಲಕ್ಷ ಲಕ್ಷ ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ….
ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಮ್ (ಸಿಆರ್‌ಎಸ್) ಪ್ರಕಾರ ಏಪ್ರಿಲ್ 28, 2022 ರವರೆಗೆ ಭಾರತದಲ್ಲಿ ಕೋವಿಡ್ -19 ನಿಂದ 5.2 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 2020 ರಲ್ಲಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 1,48,994 ಎಂದು ವರದಿಯಾಗಿದೆ, 2021 ರಲ್ಲಿ ಕೋವಿಡ್ನಿಂದ ಸಾವನ್ನಪ್ಪಿದವರ ಸಂಖ್ಯೆ 3,32,492 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ CRS ಎನ್ನುವುದು ನಿರಂತರ, ಜನನ ಮತ್ತು ಮರಣ ದಾಖಲಿಸುವ ಪ್ರಕ್ರಿಯೆಯಾಗಿದೆ. ವರದಿಗಳ ಪ್ರಕಾರ, ಜನನ ನೋಂದಣಿ ಕಡಿಮೆಯಾಗಿದೆ, ಆದರೆ ಸಾವಿನ ನೋಂದಣಿಗಳು ಗಗನಕ್ಕೇರಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಜನನ ನೋಂದಣಿ 5.98 ಲಕ್ಷ ಕಡಿಮೆಯಾಗಿದೆ ಎಂದು ಸಿ ಆರ್ ಎಸ್ ಹೇಳಿದೆ. 2018 ಮತ್ತು 2019 ರಲ್ಲಿ ಕ್ರಮವಾಗಿ 11.65 ಲಕ್ಷ ಮತ್ತು 15.51 ಲಕ್ಷ ಜನನ ನೋಂದಣಿ ಹೆಚ್ಚಾಗಿದೆ ಎಂದು ಅದು ಹೇಳಿದೆ.
ಸೋಮವಾರ ಆರೋಗ್ಯ ಸಚಿವಾಲಯ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 3,157 ಸೋಂಕುಗಳು ಮತ್ತು 26 ಸಾವುಗಳು ವರದಿಯಾಗಿದೆ. ದೇಶದಲ್ಲಿ ಎರಡು ತಿಂಗಳ ನಂತರ ಪಾಸಿಟಿವಿಟಿ ದರವು ಮತ್ತೆ 1% ಮೀರಿದೆ.