ಆಗ್ರಾ – ಲಕ್ನೋ ಎಕ್ಸ್ಪ್ರೆಸ್ ವೇಯಲ್ಲಿ ಬಸ್ ಡಿಕ್ಕಿ – 5 ಸಾವು, 18 ಮಂದಿಗೆ ಗಾಯ
ಲಕ್ನೋ, ಜುಲೈ 19: ಆಗ್ರಾ – ಲಕ್ನೋ ಎಕ್ಸ್ಪ್ರೆಸ್ ವೇಯಲ್ಲಿ ಖಾಸಗಿ ಬಸ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿದ್ದಾರೆ, 18 ಮಂದಿ ಗಾಯಗೊಂಡಿದ್ದಾರೆ.

ಆಗ್ರಾ – ಲಕ್ನೋ ಎಕ್ಸ್ಪ್ರೆಸ್ವೇಯಲ್ಲಿ ಖಾಸಗಿ ಬಸ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತ ಸಂಭವಿಸಿದಾಗ ಬಸ್ ಬಿಹಾರದ ದರ್ಭಂಗದಿಂದ ದೆಹಲಿಗೆ ಹೋಗುತ್ತಿತ್ತು.








