6ಕ್ಕೂ ಹೆಚ್ಚು ಜನ ಕಾರ್ಮಿಕರು ಸ್ಥಳದಲ್ಲೇ ಸಾವು
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ರೈಲ್ವೆ ಜೆಲ್ಲಿ ಕ್ರಷರ್‍ನಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲೇ ಭೂಮಿ ನಡುಗಿದ ಅನುಭವವಾಗಿದೆ.
ಕಳೆದ ರಾತ್ರಿ 10.20ರಿಂದ 10.35ರ ಸಮಯದಲ್ಲಿ ಶಿವಮೊಗ್ಗ ತಾಲೂಕು ಅಗಸವಳ್ಳಿ ಸಮೀಪದ ಹುಣಸೋಡು ಕಲ್ಲುಗಣಿ ಕ್ವಾರಿಯಲ್ಲಿ ಅಕ್ರಮವಾಗಿ ಲಾರಿಯಲ್ಲಿ ಡೈನಮೈಟ್‍ಗಳನ್ನು ದಾಸ್ತಾನು ಮಾಡಲಾಗಿತ್ತು.

ಒಂದೇ ಸಮಯದಲ್ಲಿ 50 ಡೈನಮೈಟ್‍ಗಳು ಸ್ಫೋಟಗೊಂಡ ಪರಿಣಾಮ ಇಷ್ಟೊಂದು ದೊಡ್ಡ ಅನಾಹುತವಾಗಿದೆ. ಡೈನಮೈಟ್ ದಾಸ್ತಾನು ಮಾಡಿದ್ದ ಲಾರಿ ಛಿದ್ರವಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ದೇಹಗಳು ಸಹ ಛೀದ್ರವಾಗಿವೆ. ಪ್ರಾಥಮಿಕ ಮಾಹಿತಿ ಪ್ರಕಾರ 6 ಜನರ ಶವ ಪತ್ತೆಯಾಗಿದ್ದು, ಒಂದೂವರೆಗ ಕಿಮೀ ವರೆಗೆ ಧೂಳು ಆವರಿಸಿದೆ. ಸ್ಫೋಟ ನಡೆದ ಸ್ಥಳದಲ್ಲಿ ಕರೆಂಟ್ ಸ್ಥಗಿತಗೊಂಡಿದ್ದರಿಂದ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಆರಂಭದಲ್ಲಿ ಭೂಮಿ ಕಂಪಿಸಿ ಭಾರಿ ಶಬ್ದ ಬಂದಿದ್ದಕ್ಕೆ ಜನ ಗಾಬರಿಯಾಗಿದ್ದರು. ನಂತರ, ಮಾಹಿತಿ ಲಭ್ಯವಾಗಿದ್ದು ಭಾರೀ ಸ್ಫೋಟಕ್ಕೆ ಇದೇ ಕಾರಣ ಇರಬಹುದು ಎನ್ನಲಾಗಿದೆ. ಆದರೆ, ಇದುವರೆಗೆ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿಲ್ಲ. ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್ಪಿ ಕೆ.ಎಂ.ಶಾಂತರಾಜು, ಡಿಸಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿದ್ದಾರೆ.
ರಾತ್ರಿ 10.21 ರಿಂದ 10.23ರವರೆಗೆ ಭೂಮಿ ಕಂಪಿಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು, ಪಾತ್ರೆಗಳು ಕೆಳಗೆ ಬಿದ್ದಿದ್ದು, ಕಿಟಕಿಗಳು ಗೋಡೆಗೆ ಹೊಡೆದುಕೊಂಡ ಪರಿಣಾಮ ಗಾಜುಗಳು ಪುಡಿ ಪುಡಿಯಾಗಿವೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿದೆ. ಶಿವಮೊಗ್ಗ ನಗರ, ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ ತಾಲೂಕಿನಾದ್ಯಂತ ಭೂಮಿ ಕಂಪಿಸಿದ ಅನುಭವದ ಜತೆಗೆ ಭಾರಿ ಸದ್ದು ಕೇಳಿ ಬಂದಿದೆ. ಕೆಲ ಕಡೆ ಮನೆಯಲ್ಲಿ ವಸ್ತಗಳು ಅಲುಗಾಡಿ ಕೆಳಗೆ ಬಿದ್ದಿವೆ. ಭಾರಿ ಪ್ರಮಾಣದ ಸ್ಫೋಟ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದವರು ಹೊರಗೋಡಿ ಬಂದಿದ್ದಾರೆ.
ಸ್ಫೋಟ ಸಂಭವಿಸಿರುವ ಜಾಗಕ್ಕೆ ಡಿಸಿ, ಎಸ್‍ಪಿ ಭೇಟಿ ನೀಡಿದ್ದು, ಇದುವರೆಗೆ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನೆಯ ಸಂಪೂರ್ಣ ಮಾಹಿತಿ ಸಿಕ್ಕಿದ ಬಳಿಕ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು.
– ರಾಘವೇಂದ್ರ, ಸಂಸದರು

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








