50ನೇ ವಿಜಯ್ ದಿವಸ್ ಸಂಭ್ರಮ : ಶುಭಕೋರಿದ ರಾಜನಾಥ್ ಸಿಂಗ್..!
ನವದೆಹಲಿ: ಇಂದು 50ನೇ ‘ವಿಜಯ್ ದಿವಸ್’ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. 1971ರ ಸಮಯದಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಸೈನಿಕರಿಗೆ ರಾಜಕೀಯ ಗಣ್ಯರು ಗೌರವ ಸಲ್ಲಿಸುತ್ತಿದ್ದಾರೆ. ಅದರಂತೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ‘ಯೋಧರ ತ್ಯಾಗ, ಭಾರತೀಯರಿಗೆ ಸ್ಫೂರ್ತಿ. ದೇಶವು ಅವರನ್ನು ಸದಾ ನೆನಪಿಸಿಕೊಳ್ಳುತ್ತದೆ. ಇಂದು ‘ವಿಜಯ ದಿವಸ್’ ಸಂದರ್ಭದಲ್ಲಿ ಭಾರತೀಯ ಸೇನೆಯ ಧೈರ್ಯ ಮತ್ತು ಶೌರ್ಯಕ್ಕೆ ವಂದಿಸುತ್ತೇನೆ. 1971ರ ಯುದ್ಧದಲ್ಲಿ ಸೈನಿಕರು ತಮ್ಮ ಶೌರ್ಯದ ಹೊಸ ಕಥೆಯನ್ನು ಬರೆದಿದ್ದಾರೆ’ ಎಂದು ಬರೆದುಕೊಮಡಿದ್ದಾರೆ.
ಗರುಡಪುರಾಣ ಪ್ರಕಾರ ಇಂತವರ ಮನೇಲಿ ಊಟ ಮಾಡಲೇಬಾರದು..
ಇನ್ನೂ 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಪ್ರತೀಕವಾಗಿ ‘ವಿಜಯ್ ದಿವಸ್’ ಅನ್ನ ಪ್ರತಿ ವರ್ಷ ಡಿ. 16ರಂದು ಆಚರಣೆ ಮಾಡಲಾಗುತ್ತೆ. ಅಂದ್ಹಾಗೆ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದರು. ಅಲ್ಲದೇ ಅದೇ ದಿನವೇ ಬಾಂಗ್ಲಾದೇಶ ಕೂಡ ರಚನೆಯಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








