52ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಪ್ಪು ಸ್ಮರಣೆ
ಗೋವಾದಲ್ಲಿ ನಡೆಯುತ್ತಿರುವ 52ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಇದೇ ತಿಂಗಳ 28 ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಚಾಲನೆ ನೀಡಿದ್ದಾರೆ.
ಇನ್ನು ಚಿತ್ರೋತ್ಸವದಲ್ಲಿ ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್, ದಿಲೀಪ್ ಕುಮಾರ್ ಹಾಗೂ ನಿರ್ಮಾಪಕ ಬುದ್ಧದೇವ್ ದಾಸ್ ಗುಪ್ತಾ ಅವರನ್ನು ಸ್ಮರಿಸಲಾಯಿತು.
ಬಳಿಕ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಮಾರ್ಟಿನ್ ಸ್ಕಾರ್ ಸೆಝಿ ಮತ್ತು ಇಸ್ಟ್ ವೆನ್ – ಝಾ ಬೊ ಅವರಿಗೆ ವರ್ಚುವಲ್ ಮೂಲಕ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರರಂಗದ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಖ್ಯಾತ ಹಿರಿಯ ನಟಿ ಹೇಮಾಮಾಲಿನಿ, ಚಿತ್ರ ಸಾಹಿತಿ ಹಾಗೂ ಲೇಖಕ ಪ್ರಸೂನ್ ಜೋಶಿ ಅವರಿಗೆ ನೀಡಲಾಯಿತು.
ಈ ಮಧ್ಯೆ, ದೇಶದ ವಿವಿಧ ಭಾಗಗಳಲ್ಲಿನ 75 ಯುವಕರನ್ನು ಆಯ್ಕೆ ಮಾಡಲಾಗಿದ್ದು, ಇವರುಗಳು ಭಾರತದ ಮುನ್ನೋಟದ ಕುರಿತು ವಿವಿಧ ಚಿತ್ರಗಳನ್ನು ಭಿತ್ತರಿಸಲಿದ್ದಾರೆ.