54 ದಿನಗಳ ಬಳಿಕ ಸಾರಿಗೆ ಬಸ್ bus ಸಂಚಾರ ಆರಂಭ : ಬೆಂಗಳೂರಿನತ್ತ ಜನ
ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಅನ್ ಲಾಕ್ ಎರಡನೇ ಹಂತ ಆರಂಭವಾಗಿದ್ದು, 54 ದಿನಗಳ ಬಳಿಕ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ.
ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಬಸ್ ಸಂಚಾರ ಆರಂಭವಾಗಿದ್ದು, ಬೆಂಗಳೂರಿನಲ್ಲಿ 2 ಸಾವಿರ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿಯಲಿವೆ.
ರಾಜ್ಯದಾದ್ಯಂತ 3000 ಕೆಎಸ್‍ಆರ್‍ಟಿಸಿ, 2,000 ಈಶಾನ್ಯ ಸಾರಿಗೆ ಬಸ್ ಗಳು ಹಾಗೂ 1,500 ವಾಯುವ್ಯ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ಇಂದು ಬೆಳಿಗ್ಗೆ 6 ರಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರ ಇರಲಿದೆ.
ಇತ್ತ ಕೆಎಸ್‍ಆರ್‍ಟಿಸಿ ಸಂಚಾರಕ್ಕೆ ಅವಕಾಶ ಬೆನ್ನಲ್ಲೆ ಜನರು ಊರಿನತ್ತ ಹೊರಟಿದ್ದಾರೆ. ಅನ್ ಲಾಕ್ ಹಿನ್ನೆಲೆ ಜನ ಊರುಗಳತ್ತ ತಂಡೋಪ ತಂಡವಾಗಿ ಹೊರಟಿದ್ದಾರೆ.
ಸರ್ಕಾರಿ ಬಸ್ ಗಳಲ್ಲಿ ಕೇವಲ 50ರಷ್ಟು ಜನರಿಗೆ ಮಾತ್ರ ಅವಕಾಶ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.









