ಟೀಮ್ ಇಂಡಿಯಾದ ಗುರು, ಮಾಜಿ ಆಟಗಾರ ರವಿಶಾಸ್ತ್ರಿ ಅವರಿಗೆ ಇಂದು 58ನೇ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಶಾಸ್ತ್ರಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಇದೇ ವೇಳೆ ರವಿಶಾಸ್ತ್ರಿ ಅವರು 1985ರ ಬೆನ್ಸನ್ ಆಂಡ್ ಹೇಜಸ್ ವಿಶ್ವ ಚಾಂಪಿಯನ್‍ಶಿಪ್‍ನ ಗೆಲುವಿನ ಫೋಟೋವೊಂದನ್ನು ಹಾಕೊಂಡು ಹಳೆಯ ಹಾಗೂ ಅವಿಸ್ಮರಣಿಯ ಪಂದ್ಯವನ್ನು ತಮ್ಮ ಹುಟ್ಟುಹಬ್ಬದಂದೇ ನೆನಪಿಸಿಕೊಂಡಿದ್ದಾರೆ. ಯಾಕಂದ್ರೆ ಆ ಟೂರ್ನಿಯಲ್ಲಿ ರವಿಶಾಸ್ತ್ರಿ ಅವರು ಅಮೋಘ ಪ್ರದರ್ಶನವನ್ನು ನೀಡಿದ್ದರು. ಅಲ್ಲದೆ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಇಡೀ ಟೂರ್ನಿಯಲ್ಲಿ ರವಿಶಾಸ್ತ್ರಿ ಅವರು 182 ರನ್ ಹಾಗೂ ಎಂಟು ವಿಕೆಟ್‍ಗಳನ್ನು ಕಬಳಿಸಿದ್ರು. ಅದೂ ಅಲ್ಲದೆ ಫೈನಲ್ ಪಂದ್ಯದಲ್ಲಿ ರವಿಶಾಸ್ತ್ರಿ ಒಂದು ವಿಕೆಟ್ ಸೇರಿದಂತೆ ಅಮೂಲ್ಯ ಅಜೇಯ 63 ರನ್ ಕೂಡ ಸಿಡಿಸಿದ್ದರು.
ಅಂದ ಹಾಗೇ ಫೈನಲ್‍ನಲ್ಲಿ ಮುಖಾಮುಖಿಯಾಗಿದ್ದು ಭಾರತ ಮತ್ತು ಪಾಕಿಸ್ತಾನ. ಪಾಕಿಸ್ತಾನ ತಂಡವನ್ನು ಆಗ ಜಾವೇದ್ ಮಿಯಾಂದಾದ್ ಮುನ್ನಡೆಸಿದ್ದರು. ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಪಾಕ್‍ನ ಗೇಮ್ ಪ್ಲಾನ್ ಗಳನ್ನು ಚೇಂಚ್ ಮಾಡಿತ್ತು. ಹೀಗಾಗಿ ಭಾರತ ಪಾಕ್ ತಂಡವನ್ನು 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 176 ರನ್‍ಗಳಿಗೆ ಕಟ್ಟಿ ಹಾಕಿತ್ತು. ಆಲ್‍ರೌಂಡ್ ಪ್ರದರ್ಶನ ನೀಡಿದ್ದ ರವಿಶಾಸ್ತ್ರಿ ಭಾರತ ತಂಡಕ್ಕೆ 8 ವಿಕೆಟ್‍ಗಳ ಜಯ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ತನ್ನ ಹುಟ್ಟು ಹಬ್ಬದ ಸಂಭ್ರಮದಲ್ಲಿ 35 ವರ್ಷಗಳ ಹಿಂದಿನ ಗೆಲುವಿನ ಫೋಟೋ ಹಾಕೊಂಡು ತನ್ನ ಹಳೆಯ ಗೆಲುವಿನ ಸಂಭ್ರಮವನ್ನು ಹುಟ್ಟುಹಬ್ಬದ ವೇಳೆ ನೆನಪಿಸಿಕೊಂಡ್ರು.